Publish Date: Tue, 17 Feb 2026 (08:49 IST)
Updated Date: Tue, 17 Feb 2026 (08:59 IST)
ಕೊಲೊಂಬೊ: ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ಕ್ಯಾಚ್ ಬಿಟ್ಟಿದ್ದಕ್ಕೆ ಮೈದಾನದಲ್ಲೇ ಕುಲದೀಪ್ ಯಾದವ್ ಗೆ ಬೈದಿದ್ದ ಸೂರ್ಯಕುಮಾರ್ ಯಾದವ್ ಈಗ ಪ್ಯಾಚಪ್ ಮಾಡಲು ಬಂದಿದ್ದಾರೆ. ಇಂತಹದ್ದೊಂದು ಫನ್ನಿ ವಿಡಿಯೋವನ್ನು ಸೂರ್ಯ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮೊನ್ನೆ ಕೊಲೊಂಬೋದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನದ ಹಾರ್ದಿಕ್ ಪಾಂಡ್ಯ ಓವರ್ ನಲ್ಲಿ ಕುಲದೀಪ್ ಯಾದವ್ ಕ್ಯಾಚ್ ಒಂದನ್ನು ಬಿಟ್ಟಿದ್ದರು. ಆ ಕ್ಯಾಚ್ ಹಿಡಿದಿದ್ದರೆ ಪಾಕಿಸ್ತಾನ 100 ರನ್ ಒಳಗೇ ಆಲೌಟ್ ಆಗುತ್ತಿತ್ತು.
ಆದರೆ ಕುಲದೀಪ್ ಯಾದವ್ ಅಲ್ಲೇ ಯಡವಟ್ಟು ಮಾಡಿದ್ದು. ಕ್ಯಾಚ್ ಬಿಟ್ಟಿದ್ದು ಮಾತ್ರವಲ್ಲ, ಅದನ್ನು ಕೈಯಿಂದ ತಳ್ಳಿ ಬೌಂಡರಿ ಲೈನ್ ಆಚೆ ಹಾಕಿ ಸಿಕ್ಸರ್ ಆಗುವಂತೆ ಮಾಡಿದ್ದರು. ಇದಕ್ಕೆ ಸೂರ್ಯಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಪಂದ್ಯ ಮುಗಿದ ನಂತರ ಮೈದಾನದಲ್ಲೇ ಕುಲದೀಪ್ ಯಾದವ್ ಗೆ ಬೈದಿದ್ದರು. ಕುಲದೀಪ್ ಸಪ್ಪೆ ಮುಖ ಮಾಡಿಕೊಂಡು ಮುಂದೆ ನಡೆದಿದ್ದರು.
ಇದೀಗ ಅದರ ಮುಂದೆ ಏನಾಯ್ತು ಎಂದು ಸ್ವತಃ ಸೂರ್ಯಕುಮಾರ್ ಯಾದವ್ ವಿಡಿಯೋ ಹಂಚಿಕೊಂಡಿದ್ದಾರೆ. ಹೋಟೆಲ್ ರೂಂನಲ್ಲಿ ತನಗೆ ಎದುರಾಗುವ ಕುಲದೀಪ್ ಯಾದವ್ ಬೆನ್ನು ತಟ್ಟಿದರೂ ಅವರು ಬಿರುಸಾಗಿ ತಟ್ಟಿ ಮುಂದೆ ಸಾಗುತ್ತಾರೆ. ಇದಕ್ಕೆ ಫನ್ನಿಯಾಗಿ ಅಡಿಬರಹ ಕೊಟ್ಟಿರುವ ಸೂರ್ಯ ಕೋಪ ಬಿಡು ಗೆಳೆಯ ಎಂದು ಬರೆದುಕೊಂಡಿದ್ದಾರೆ. ಈ ಫನ್ನಿ ವಿಡಿಯೋಗೆ ಸಾಕಷ್ಟು ಜನ ನಕ್ಕು ಕಾಮೆಂಟ್ ಮಾಡಿದ್ದಾರೆ.