Publish Date: Sat, 14 Feb 2026 (21:46 IST)
Updated Date: Sat, 14 Feb 2026 (21:48 IST)
ಭಾರತದ ಬದ್ಧ ವೈರಿ ಪಾಕಿಸ್ತಾನದ ಜತೆ ಟೀಂ ಇಂಡಿಯಾ ಮೊದಲ ಟೀ20 ವಿಶ್ವಕಪ್ ಪಂದ್ಯಾಟವನ್ನು ಎದುರಿಸಲಿದೆ. T20 ವಿಶ್ವಕಪ್ ಟೂರ್ನಿಯಲ್ಲಿ ನಾಳೆ ನಡೀತಾ ಇರೋದು ಸೂಪರ್ ಸಂಡೇಯ ಸೂಪರ್ ಕದನವಾಗಿದ್ದು, ಭಾರೀ ಕುತೂಹಲವನ್ನು ಮೂಡಿಸುತ್ತಿರುವ ಬೆನ್ನಲ್ಲೇ ಟೀಂ ಇಂಡಿಯಾ ಕ್ಯಾಪ್ಟನ್ ಪಾಕ್ ಜತೆಗಿನ ಶೇಕ್ ಹ್ಯಾಂಡ್ ಬಗ್ಗೆ ಮೌನ ಮುರಿದಿದ್ದಾರೆ.
ಇಂದು ನಡೆದ ಪ್ರೆಸ್‌ಮೀಟ್‌ನಲ್ಲಿ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್‌ಗೆ ಪಾಕ್ ಜತೆಗೆ ಶೇಕ್ ಹ್ಯಾಂಡ್ ಮಾಡಲಾಗುವುದೆ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು.
ಟೀಮ್ ಇಂಡಿಯಾ ತಮ್ಮ T20 ವಿಶ್ವಕಪ್ 2026 ಪಂದ್ಯದ ಟಾಸ್ ಸಮಯದಲ್ಲಿ ಪಾಕಿಸ್ತಾನದೊಂದಿಗೆ ಕೈಕುಲುಕಲು ಸಿದ್ಧರಿದ್ದಾರೆಯೇ ಎಂಬುದರ ಕುರಿತು ಸೂರ್ಯಕುಮಾರ್ ಯಾದವ್ ಬಿಗಿಯಾಗಿ ಉಳಿದಿದ್ದಾರೆ. "ನಾವು ಟಾಸ್‌ನಲ್ಲಿ ಹ್ಯಾಂಡ್‌ಶೇಕ್ ಬಗ್ಗೆ ನೋಡೋಣ. 24 ಗಂಟೆಗಳ ಕಾಲ ಕಾಯಿರಿ ಎಂದು ಹೇಳುವ ಮೂಲಕ ಕುತೂಹಲದ ಹೇಳಿಕೆ ನೀಡಿದ್ದಾರೆ.
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಪಾಕ್ ನಡೆಸಿದ ದಾಳಿ ಬಳಿಕ ಟೀಂ ಇಂಡಿಯಾ, ಪಾಕಿಸ್ತಾನ ಜತೆಗೆ ಕೈಕುಲುಕುತ್ತಿಲ್ಲ. ಈ ವಿಚಾರ ಭಾರೀ ಚರ್ಚೆಗೂ ಕಾರಣವಾಗಿತ್ತು. ಇದೀಗ ನಾಳೆ ನಡೆಯುವ ಪಂದ್ಯಾಟದಲ್ಲಿ ಟೀಂ ಇಂಡಿಯಾ ಆಟಗಾರರ ನಡೆ ಭಾರೀ ಕುತೂಹಲವನ್ನು ಮೂಡಿಸಿದೆ.