Daily Horoscope

Select Your Language

Notifications

webdunia
webdunia
webdunia
webdunia

ಸೂರ್ಯ ಭಾಯಿ ಬ್ಯಾಗ್ ಪ್ಯಾಕ್ ಮಾಡು ಎಂದ್ರು, ನಂಗೆ ನಂಬಕ್ಕೇ ಆಗಲಿಲ್ಲ: ಮೊಹಮ್ಮದ್ ಸಿರಾಜ್

Mohammed Siraj T20 WC
Photo Credit: X
ಮುಂಬೈ: ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡಕ್ಕೆ ಕೊನೆಯ ಕ್ಷಣದಲ್ಲಿ ಬದಲಿ ಆಟಗಾರನಾಗಿ ಎಂಟ್ರಿ ಕೊಟ್ಟ ವೇಗಿ ಮೊಹಮ್ಮದ್ ಸಿರಾಜ್ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಸೂರ್ಯ ಭಾಯಿ ಕೊನೆಯ ಬ್ಯಾಗ್ ಪ್ಯಾಕ್ ಮಾಡು ಎಂದ್ರು. ನನಗೆ ನಂಬಕ್ಕೇ ಆಗಲಿಲ್ಲ ಎಂದಿದ್ದಾರೆ.

ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡ ಘೋಷಿಸಿದಾಗ ಮೊಹಮ್ಮದ್ ಸಿರಾಜ್ ಇರಲಿಲ್ಲ. ಆದರೆ ಮೊದಲ ಪಂದ್ಯಕ್ಕೆ ಎರಡು ದಿನ ಬಾಕಿಯಿರುವಾಗ ವೇಗಿ ಹರ್ಷಿತ್ ರಾಣಾ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದರು. ಹೀಗಾಗಿ ಮೊಹಮ್ಮದ್ ಸಿರಾಜ್ ರನ್ನು ಬದಲಿ ಆಟಗಾರನನ್ನಾಗಿ ತಂಡಕ್ಕೆ ಸೇರ್ಪಡೆಗೊಳಿಸಲಾಯಿತು.

ಹೇಗಿದ್ದರೂ ವಿಶ್ವಕಪ್ ಗೆ ಆಯ್ಕೆಯಾಗಲಿಲ್ಲ ಎಂದು ಸಿರಾಜ್ ಸ್ಪೇನ್ ಗೆ ಟೂರ್ ಮಾಡಲು ಪ್ಲ್ಯಾನ್ ಮಾಡಿದ್ದರಂತೆ. ಅಲ್ಲದೆ ರಂಜಾನ್ ಹಬ್ಬ ಬೇರೆಯಿತ್ತು. ಹೀಗಾಗಿ ಮೊಹಮ್ಮದ್ ಸಿರಾಜ್ ರಜಾ ಮೂಡ್ ನಲ್ಲಿದ್ದರು. ಆದರೆ ಇದ್ದಕ್ಕಿದ್ದಂತೆ ಮೊನ್ನೆ ಸೂರ್ಯಕುಮಾರ್ ಯಾದವ್ ಕರೆ ಬಂದಾಗ ಅವರಿಗೆ ಅಚ್ಚರಿಯಾಗಿತ್ತಂತೆ.

‘ಸೂರ್ಯ ಭಾಯಿ ಕರೆ ಮಾಡಿ ಮಿಯಾನ್ ಬ್ಯಾಗ್ ಪ್ಯಾಕ್ ಮಾಡು, ನೀನು ತಂಡದಲ್ಲಿದ್ದೀಯಾ ಎಂದರು. ನನಗೆ ನಂಬಲೇ ಆಗಲಿಲ್ಲ. ಹೀಗಾಗಿ ಅರೇ.. ತಮಾಷೆ ಮಾಡ್ಬೇಡಿ ಸೂರ್ಯ ಭಾಯಿ ಎಂದೆ. ಆದರೆ ಕೆಲವು ಕ್ಷಣಗಳ ನಂತರ ನನಗೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ನಿಂದ ಕರೆ ಬಂತು. ಆಗ ಕನ್ ಫರ್ಮ್ ಆಯ್ತು. ಟಿ20 ವಿಶ್ವಕಪ್ ತವರಿನಲ್ಲಿ ಆಡುವುದು ನನ್ನ ಹಣೆಯಲ್ಲಿ ಬರೆದಿತ್ತು ಎನಿಸಿತ್ತಿದೆ. ಅದಕ್ಕೇ ನಾನು ಈವತ್ತು ಇಲ್ಲಿದ್ದೇನೆ’ ಎಂದು ಸಿರಾಜ್ ಹೇಳಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಮೊಹಮ್ಮದ್ ಸಿರಾಜ್ 3 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಭಾಯಿ ಮೊದಲು ಫೀಲ್ಡಿಂಗ್ ಮಾಡ್ಲಾ.. ಸೂರ್ಯಕುಮಾರ್ ಯಾದವ್ ಪ್ರಶ್ನೆಗೆ ಹಿಟ್ ಮ್ಯಾನ್ ಉತ್ತರ ಹೀಗಿತ್ತು Video