Publish Date: Sun, 15 Feb 2026 (16:33 IST)
Updated Date: Sun, 15 Feb 2026 (16:40 IST)
ಕೊಲೊಂಬೋ: ಪಾಕಿಸ್ತಾನ ವಿರುದ್ಧ ಇಂದು ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಎದುರಾಳಿಗಳನ್ನು ಇನ್ನಿಲ್ಲದಂತೆ ರೋಸ್ಟ್ ಮಾಡಿದ್ದಾರೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಸೂರ್ಯಕುಮಾರ್ ಯಾದವ್ ಗೆ ಈ ಬಾರಿ ನೀವು ಪಾಕಿಸ್ತಾನ ಆಟಗಾರರ ಕೈ ಕುಲುಕುತ್ತೀರಾ ಎಂದು ಪತ್ರಕರ್ತರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸೂರ್ಯ 'ಇನ್ನೂ ಸಾಕಷ್ಟು ಸಮಯವಿದೆ. ಚೆನ್ನಾಗಿ ಊಟ ಮಾಡೋಣ, ನಿದ್ರೆ ಮಾಡೋಣ.. ಆಮೇಲೆ ಮುಂದಿನದ್ದು ನೋಡೋಣ ಎಂದು ರೋಸ್ಟ್ ಮಾಡಿದ್ದಾರೆ.
ಇನ್ನು, ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ನಾವು ಅಭಿಷೇಕ್ ಶರ್ಮಾ ಆಡಲಿ ಎಂದೇ ಬಯಸುತ್ತೇವೆ. ನಾವು ಅತ್ಯುತ್ತಮ ಆಟಗಾರರನ್ನೇ ಎದುರಿಸಲು ಬಯಸುತ್ತೇವೆ ಎಂದಿದ್ದರು. ಅವರಿಗೆ ಟಾಂಗ್ ಕೊಟ್ಟ ಸೂರ್ಯ ಒಂದು ವೇಳೆ ನಿಮಗೆ ಅಭಿಷೇಕ್ ಆಡಬೇಕು ಎನಿಸಿದರೆ ಅವರನ್ನು ಆಡಿಸೋಣ ಬಿಡಿ ಎಂದಿದ್ದಾರೆ.
ಇಷ್ಟಕ್ಕೇ ಸೂರ್ಯ ಸುಮ್ಮನಾಗಲಿಲ್ಲ. ಪತ್ರಕರ್ತರೊಬ್ಬರು ಪಾಕಿಸ್ತಾನ ಜೊತೆ ಉಭಯ ದೇಶದ ಕ್ರಿಕೆಟ್ ಸರಣಿ ಆಡಲು ನೀವು ಸಿದ್ಧರಿದ್ದೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸೂರ್ಯ ನಾನು ಈಗ ಇದನ್ನು ನಿರ್ಧರಿಸುವ ಸ್ಥಾನದಲ್ಲಿ ಇಲ್ಲ. ಒಂದು ವೇಳೆ ನಾನು ಆ ಸ್ಥಾನಕ್ಕೆ ಬಂದರೆ ಆಮೇಲೆ ನೋಡೋಣ ಎಂದಿದ್ದಾರೆ.