ಕೊಲೊಂಬೋ: ಟೀಂ ಇಂಡಿಯಾ ವೇಗಿ ಅರ್ಷ್ ದೀಪ್ ಸಿಂಗ್ ಎಷ್ಟು ಒಳ್ಳೆಯವರು ನೋಡಿ. ಅವರು ಮಾಡಿದ ಕೆಲಸಕ್ಕೆ ಮಗುವೊಂದು ಫುಲ್ ಖುಷಿಯಾಗಿದೆ.
ಟೀಂ ಇಂಡಿಯಾ ಕ್ರಿಕೆಟಿಗರು ಎಲ್ಲೇ ಹೋದರೂ ಸಾಕಷ್ಟು ಅಭಿಮಾನಿಗಳು ಅವರ ಆಟೋಗ್ರಾಫ್ ಗಾಗಿ ಮುತ್ತಿಕೊಳ್ಳುತ್ತಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇಲ್ಲದೇ ಇದ್ದರೂ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮುಂದೆ ಅಭಿಮಾನಿಗಳು ಆಟೋಗ್ರಾಫ್ ಗೆ ಬೇಡಿಕೆಯಿಡುತ್ತಿದ್ದಾರೆ.
ಇದೇ ರೀತಿ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ಆಟಗಾರರು ಅಭ್ಯಾಸಕ್ಕೆ ಬರುವಾಗ ಸಾಕಷ್ಟು ಅಭಿಮಾನಿಗಳು ಆಟೋಗ್ರಾಫ್ ಗಾಗಿ ಕಾದು ನಿಂತಿದ್ದರು. ಆ ಪೈಕಿ ಅರ್ಷ್ ದೀಪ್ ಸಿಂಗ್ ಕೆಲವು ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಲು ಮುಂದಾಗಿದ್ದರು. ಈ ವೇಳೆ ಸೂರ್ಯಕುಮಾರ್ ಯಾದವ್ ಆಟೋಗ್ರಾಫ್ ನೀಡದೇ ಮುಂದೆ ನಡೆದಿದ್ದರು.
ಆದರೆ ಅವರ ಅಪ್ಪಟ ಅಭಿಮಾನಿ ಮಗುವೊಂದು ಸೂರ್ಯ ದಾದ ಪ್ಲೀಸ್ ಬನ್ನಿ ಆಟೋಗ್ರಾಫ್ ಕೊಡಿ ಎಂದು ಕೂಗಿಕೊಂಡಿದೆ. ಇದನ್ನು ಗಮನಿಸಿ ಅರ್ಷ್ ದೀಪ್ ಸಿಂಗ್ ತಾವೂ ಮಗುವಿನ ಜೊತೆ ಸೂರ್ಯ ದಾದಾ.. ಎಂದು ಕ್ಯೂಟ್ ಆಗಿ ಕರೆದಿದ್ದಾರೆ. ಬಳಿಕ ಸೂರ್ಯ ತಾವಾಗಿಯೇ ಬಂದು ಮಗುವಿಗೆ ಆಟೋಗ್ರಾಫ್ ನೀಡಿದ್ದಾರೆ. ಇದರಿಂದ ಆ ಮಗುವಿನ ಖುಷಿ ಹೇಳತೀರದು. ಈ ವಿಡಿಯೋ ಇಲ್ಲಿದೆ ನೋಡಿ.