Publish Date: Tue, 28 Jan 2025 (17:19 IST)
Updated Date: Tue, 28 Jan 2025 (17:24 IST)
ಬೆಂಗಳೂರು: ನಿರೂಪಕಿ ಚೈತ್ರಾ ವಾಸುದೇವ್ ಅವರು ಎರಡನೇ ಮದುವೆಗೆ ಸಜ್ಜಾಗುತ್ತಿದ್ದಾರೆ. ಈ ಹಿಂದೆ ತಮ್ಮ ಮೊದಲನೇ ಮದುವೆ ಡಿವೋರ್ಸ್ ಬಗ್ಗೆ ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದರು. ತಮ್ಮ ಡಿಗ್ರಿ ಮುಗಿಯುತ್ತಿದ್ದಂತ್ತೆ ಉದ್ಯಮಿಯನ್ನು ಮದುವೆಯಾದ ಚೈತ್ರಾ ವಾಸುದೇವ್ ಅವರು 5 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು.
ಇದೀಗ ಚೈತ್ರಾ ಅವರು ಎರಡನೇ ಮದುವೆಗೆ ತಯಾರಾಗುತ್ತಿದ್ದಾರೆ. ಮದುವೆಗಾಗಿ ಪ್ಯಾರಿಸ್‌ನಲ್ಲಿ ಭರ್ಜರಿ ಶಾಪಿಂಗ್ ಮಾಡುತ್ತಿದ್ದಾರೆ. ನಡೆಸುತ್ತಿದ್ದಾರೆ. ಇನ್ಸ್ಟಾಗ್ರಾಂ ಖಾತೆಯಲ್ಲಿ ಅವರು ಪ್ಯಾರಿಸ್‌ನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್‌ನ ವಿಡಿಯೋ ಹಂಚಿಕೊಂಡಿದ್ದು, ಮದುವೆ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ನಾನು ನಿಮ್ಮೊಂದಿಗೆ ಹೃದಯಪೂರ್ವಕವಾದ ಒಂದು ಸಂತೋಷದ ಸುದ್ದಿ ಹಂಚಲು ಉತ್ಸುಕನಾಗಿದ್ದೇನೆ. ನಾನು ಈ ವರ್ಷ 2025ರ ಮಾರ್ಚ್‌ನಲ್ಲಿ ಜೀವನದ ಹೊಸ ಹೆಜ್ಜೆ ಇಡುತ್ತಿದ್ದೇನೆ. ನನ್ನ ವಿವಾಹದ ಸುಂದರ ಪ್ರಯಾಣ ಆರಂಭವಾಗಲಿದೆ. ಈ ಮುಂದಿನ ಹೆಜ್ಜೆ ಹಾಕುವಾಗ, ನಾನು ಈ ಹೊಸ ಅಧ್ಯಾಯಕ್ಕಾಗಿ ನಿಮ್ಮ ಪ್ರೀತಿ, ಆಶೀರ್ವಾದಗಳು ಮತ್ತು ಬೆಂಬಲವನ್ನು ಕೋರುತ್ತೇನೆ ಎಂದು ಬರೆದುಕೊಂಡಿದ್ದಾರೆ. ಭಾವಿ ಪತಿಯ ಜೊತೆ ಫೋಟೋಶೂಟ್ ಮಾಡಿಸಿದ್ದಾರೆ. ಆ ಹುಡುಗ ಯಾರು ಎನ್ನುವುದನ್ನು ಅವರು ರಿವೀಲ್ ಮಾಡಿಲ್ಲ. ಮಾರ್ಚ್ ತಿಂಗಳಿನಲ್ಲಿ ಮದುವೆಯಾಗುತ್ತಿದ್ದರೂ ಮದುವೆ ದಿನಾಂಕವನ್ನು ಅವರು ಇನ್ನೂ ತಿಳಿಸಿಲ್ಲ.