Publish Date: Fri, 13 Nov 2026 (10:25 IST)
Updated Date: Fri, 13 Nov 2026 (10:28 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13 ರ ಕಳೆದ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತು ನಿಜವಾಗಿದೆ. ಈ ವಾರ ಸ್ನೇಹಿತರ ನಡುವೆಯೇ ಧಗ ಧಗ ಬೆಂಕಿ ಹತ್ತಿಕೊಂಡಿದೆ.
ಬಿಗ್ ಬಾಸ್ ಮನೆಯಲ್ಲಿ ಇದುವೆರೆಗೆ ಟಾಸ್ಕ್ ವಿಚಾರ, ನಾಮಿನೇಷನ್, ಉತ್ತಮ, ಕಳಪೆ ಎಲ್ಲಾ ವಿಚಾರಕ್ಕೂ ಎಲ್ಲರೂ ತಮ್ಮ ಸ್ನೇಹಿತರನ್ನು ರಕ್ಷಿಸಿಕೊಳ್ಳುತ್ತಿದ್ದರು. ಆದರೆ ಕಳೆದ ವಾರದ ಕಿಚ್ಚ ಸುದೀಪ್ ಇದುವರೆಗೆ ಏನೋ ಸ್ನೇಹಿತರನ್ನು ಕಾಪಾಡಿಕೊಂಡು ಬಂದ್ರಿ. ಆದರೆ ಮುಂದಿನ ದಿನ ಹೀಗಿರಲ್ಲ. ನಿಮ್ಮ ಸ್ನೇಹಿತರ ನಡುವೆಯೇ ಕಿತ್ತಾಡಬೇಕಾದ ಪ್ರಸಂಗ ಬರಬೇಕಾಗುತ್ತದೆ ಎಂದಿದ್ದರು.
ಅದು ಈ ವಾರ ನಿಜವಾಗಿದೆ. ಈ ವಾರ ಮಂಜ ರಿ ಎಂಟ್ರಿಯಾಗುತ್ತಿದ್ದಂತೇ ಬಿಗ್ ಬಾಸ್ ಮನೆ ರಣ ರಂಗವಾಗಿದೆ. ಇಷ್ಟು ದಿನ ಜೋಡೆತ್ತುಗಳಂತಿದ್ದ ಗಗನ್ ಮತ್ತು ತಾಂಡವ್ ರಾಮ್ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪರಸ್ಪರ ನಾನೇ ಗ್ರೇಟ್ ಎಂದು ಆರೋಪ-ಪ್ರತ್ಯಾರೋಪ ಮಾಡಿದ್ದರು. ಆದರೆ ನಂತರ ಅವರಿಬ್ಬರು ಪ್ಯಾಚ್ ಅಪ್ ಮಾಡಿಕೊಂಡರು ಎನ್ನುವುದು ಬೇರೆ.
ಆದರೆ ಹೆಚ್ಚು ಹತ್ತಿಕೊಂಡಿದ್ದು ಆಸಿಯಾ-ಯಶಸ್, ಪ್ರಶಾಂತ್-ಧನುಷ್, ಸೋನಿಕಾ-ಧನುಷ್ ನಡುವೆ. ಟಾಸ್ಕ್ ವೇಳೆ ಪ್ರಬಲ ಅಲ್ಲ ಎನ್ನುವ ಕಾರಣಕ್ಕೆ ತಮ್ಮನ್ನು ಹೊರಗಿಟ್ಟಿದ್ದಕ್ಕೆ ಯಶಸ್ ಮೇಲೆ ಆಸಿಯಾ ಕೂಗಾಡಿದರು. ಇನ್ನು ಸೋನಿಕಾ ಮತ್ತು ಧನುಷ್ ನಡುವೆಯೂ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಕಿತ್ತಟವಾಯಿತು. ಧನುಷ್ ಗೆ ಪ್ರಶಾಂತ್ ಜೊತೆ ಉತ್ತಮ ಬಾಂಧವ್ಯವಿತ್ತು. ಆದರೆ ಟಾಸ್ಕ್ ವೇಳೆ ಇಬ್ಬರ ನಡುವೆ ಬಾ ಹೊಡಿ ಎನ್ನುವ ಮಟ್ಟಕ್ಕೆ ಕಲಹ ತಾರಕಕ್ಕೇರಿತ್ತು. ಇದರೊಂದಿಗೆ ಬಿಗ್ ಬಾಸ್ ಮನೆಯಲ್ಲಿ ಈ ವಾರದಿಂದ ಆಟ ಚೇಂಜ್ ಆಗಲಿದೆ ಎನ್ನುವ ಕಿಚ್ಚ ಸುದೀಪ್ ಮಾತು ಮೊದಲ ವಾರವೇ ನಿಜವಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ