Publish Date: Mon, 09 Nov 2026 (11:02 IST)
Updated Date: Sun, 08 Nov 2026 (22:15 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ದುರ್ವರ್ತನೆಗಾಗಿ ಮನೆಯಿಂದ ಹೊರಬಿದ್ದಿದ್ದ ಮಂಜುನಾಥ್ (ಮಂಜ) ವಾಪಸ್ ಆಗಿದ್ದಾರೆ. ಇದಕ್ಕೆ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ನಿನ್ನೆ ಕಿಚ್ಚ ಸುದೀಪ್ ನಡೆಸಿಕೊಡುವ ಸಂಡೇ ಎಪಿಸೋಡ್ ನೋಡಿ ಪ್ರೇಕ್ಷಕರಿಗೆ ಅಚ್ಚರಿಯಾಗಿತ್ತು. ಯಾಕೆಂದರೆ ಈ ಹಿಂದೆ ದುರ್ವರ್ತನೆ ತೋರಿದ್ದಕ್ಕೆ ಮನೆಯಿಂದ ಹೊರ ಕಳುಹಿಸಲಾಗಿದ್ದ ಮಂಜನನ್ನು ವಾಪಸ್ ಮನೆಗೆ ಕಳುಹಿಸಲು ನಿರ್ಧರಿಸಲಾಗಿದೆ.
ಮನೆಯಲ್ಲಿ ಅಸಭ್ಯ ಪದ ಬಳಕೆ ಮಾಡಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಹೊರ ಕಳುಹಿಸಲಾಗಿತ್ತು. ಇದಾಗಿ ನಾಲ್ಕು ವಾರಗಳ ನಂತರ ಈಗ ಮತ್ತೆ ಅವರನ್ನು ಶೋಗೆ ವಾಪಸ್ ಕರೆಸಿಕೊಳ‍್ಳಲಾಗಿದೆ. ಅದೂ ಈ ಸೀಸನ್ ಮುಗಿಸಲು ಇನ್ನೇನು ಕೆಲವೇ ವಾರವಿರುವಾಗ ಎವಿಕ್ಟ್ ಆಗಿದ್ದ ಸ್ಪರ್ಧಿಯನ್ನು ಮರಳಿ ಕರೆಸುವ ಅಗತ್ಯವೇನಿತ್ತು ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.
ಹಾಗಿದ್ದರೆ ಈ ಹಿಂದೆ ಇದೇ ರೀತಿ ದುರ್ವರ್ತನೆ ತೋರಿದ್ದ ಜಗದೀಶ್, ಹುಚ್ಚ ವೆಂಕಟ್ ಗೆ ಯಾಕೆ ಎರಡನೇ ಅವಕಾಶ ನೀಡಿಲ್ಲ. ಮಂಜನಿಗೆ ಮಾತ್ರ ಯಾಕೆ ಈ ವಿಶೇಷ ರಿಯಾಯಿತಿ ಎಂದು ಪ್ರೇಕ್ಷಕರು ಪ್ರಶ್ನೆ ಮಾಡಿದ್ದಾರೆ. ಆದರೆ ಮಂಜನ ಅಭಿಮಾನಿಗಳಿಗೆ ಮಾತ್ರ ಈ ನಿರ್ಧಾರದಿಂದ ಭಾರೀ ಖುಷಿಯಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ