Daily Horoscope

Select Your Language

Notifications

webdunia
webdunia
webdunia
webdunia

BBK13: ಉತ್ತಮ ಪಡೆದರೂ ತಾಂಡವ್ ರಾಮ್ ಗೆ ಇಂದು ಕ್ಲಾಸ್ ಗ್ಯಾರಂಟಿನಾ

Tandav Ram
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ಈ ವಾರ ಉತ್ತಮ ಪಡೆದರೂ ಸ್ಪರ್ಧಿ ತಾಂಡವ್ ರಾಮ್ ಗೆ ಕಿಚ್ಚನ ಕ್ಲಾಸ್ ಗ್ಯಾರಂಟಿ ಎನ್ನಲಾಗುತ್ತಿದೆ.

ಕಳೆದ ಎರಡು ವಾರ ಯಾವುದೇ ಕಳಂಕವಿಲ್ಲದೇ ಅತ್ಯುತ್ತಮ ಆಟವಾಡಿದ್ದ ತಾಂಡವ್ ರಾಮ್ ಈ ವಾರ ಕೊಂಚ ಎಡವಿದ್ದಾರೆ. ಆಟದ ವಿಚಾರದಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಅವರ ಕೆಲವೊಂದು ವರ್ತನೆ ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಮೊದಲನೆಯದಾಗಿ ಕುಚಿಕು ಗೆಳೆಯ ಎಂದುಕೊಂಡಿರುವ ಗಗನ್ ಬಗ್ಗೆಯೇ ಪ್ರಶಾಂತ್ ಬಳಿ ಮಾತನಾಡಿದ್ದು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದಿನ ವಾರ ತಾಂಡವ್ ಅತ್ಯುತ್ತಮ ಗೆಳೆಯ, ಗಗನ್ ನೀವು ಅದಕ್ಕೆ ಅರ್ಹರದಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಆದರೆ ಈಗ ಸ್ವತಃ ತಾಂಡವ್ ಬೆನ್ನ ಹಿಂದೆ ಗಗನ್ ಬಗ್ಗೆ ಮಾತನಾಡಿದ್ದನ್ನು ವೀಕ್ಷಕರು ಪ್ರಶ್ನೆ ಮಾಡಿದ್ದಾರೆ.

ಇನ್ನೊಂದು ಪ್ರಮುಖ ವಿಚಾರವೆಂದರೆ ಪತ್ರ ಟಾಸ್ಕ್ ನಲ್ಲಿ ಗಾನವಿ ಮತ್ತು ಆಸಿಯಾ ಮನೆಯವರ ಪತ್ರದ ವಿಚಾರದಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂದಾಗ ತಾಂಡವ್ ಮನೆಯಲ್ಲಿರುವ ತಮ್ಮ ಆಪ್ತರನ್ನು ಕಣ್ಣು ಸನ್ನೆ ಮಾಡಿ ಗಾನವಿಗೆ ವೋಟ್ ಹಾಕುವಂತೆ ಮಾಡಿದ್ದಾರೆ ಎನ್ನುವುದು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಎರಡು ವಿಚಾರಕ್ಕೆ ತಾಂಡವ್ ಗೆ ಕ್ಲಾಸ್ ತೆಗದುಕೊಳ್ಳಲೇಬೇಕು ಎಂದು ವೀಕ್ಷಕರು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮಾಯಣ ಪಾರ್ಟ್ 1 ಡೇ 1 ಕಲೆಕ್ಷನ್:ರಣ್‌ಬೀರ್, ಸಾಯಿ ಪಲ್ಲವಿ ಅಭಿನಯಕ್ಕೆ ಪ್ರೇಕ್ಷಕರ ತೀರ್ಪು ಏನು