Daily Horoscope

Select Your Language

Notifications

webdunia
webdunia
webdunia
webdunia

BBK13: ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಈ ಇಬ್ಬರಿಗೆ ರುಬ್ಬೋದು ಗ್ಯಾರಂಟಿ

Kiccha Sudeep
ಬೆಂಗಳೂರು: ಬಿಗ್ ಬಾಸ್ 13 ರಲ್ಲಿ ಇಂದು ನಡೆಯಲಿರುವ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಈ ಇಬ್ಬರಿಗೆ ರುಬ್ಬೋದು ಗ್ಯಾರಂಟಿ ಎನ್ನುತ್ತಿದ್ದಾರೆ ವೀಕ್ಷಕರು.

ಕಳೆದ ವಾರವೇನೋ ಮನೆ ಮಂದಿ ತಮಗೆ ಕೊಟ್ಟ ಟಾಸ್ಕ್ ಅದ್ಭುತವಾಗಿ ನಿಭಾಯಿಸಿ ಕಿಚ್ಚನ ಕೈಯಲ್ಲಿ ಶಹಬ್ಬಾಶ್ ಹೇಳಿಸಿಕೊಂಡಿದ್ದರು. ಈ ವಾರವೂ ಟಾಸ್ಕ್ ಏನೋ ಮನರಂಜನೆಯಿಂದ ಕೂಡಿತ್ತು. ಆದರೆ ಗಗನ್ ಮತ್ತು ಯಶಸ್ ಈ ವಾರ ಕಿರಿಕ್ ಮಾಡಿಕೊಂಡಿದ್ದಾರೆ.

ಒಂದೆಡೆ ಗಗನ್ ಮತ್ತು ಯಶಸ್ ಕಿತ್ತಾಡುವಾಗ ಯಶಸ್ ಹೇಳಿದ ಪದವೊಂದು ವೀಕ್ಷಕರ ಕೆಂಗಣ‍್ಣಿಗೆ ಗುರಿಯಾಗಿದೆ. ಸಭ್ಯತೆ ಮೀರಿದ ಪದ ಬಳಕೆ ಬಗ್ಗೆ ಕಿಚ್ಚ ಈ ಬಾರಿ ಯಶಸ್ ಗೆ ಕ್ಲಾಸ್ ತೆಗೆದುಕೊಳ‍್ಳುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಇನ್ನೊಂದೆಡೆ ಇದೇ ಜಗಳದಲ್ಲಿ ಗಗನ್ ಕೂಡಾ ಭಾಗಿಯಾಗಿದ್ದರು. ಕ್ಯಾಪ್ಟನ್ ಸೌಂದರ್ಯ ಜೊತೆಗೂ ಮನೆಯ ಪ್ರಾಪರ್ಟಿ ಒಡೆದ ವಿಚಾರಕ್ಕೆ ತಗಾದೆ ತೆಗೆದಿದ್ದಾರೆ. ಈ ಕಾರಣಕ್ಕೆ ಈ ಇಬ್ಬರಿಗೂ ಈ ವಾರ ಕ್ಲಾಸ್ ಗ್ಯಾರಂಟಿ ಎನ್ನಲಾಗುತ್ತಿದೆ.

ಇನ್ನು, ಟಾಸ್ಕ್ ವಿಚಾರಕ್ಕೆ ಬಂದರೆ ಈ ವಾರ ಶೆಟ್ಟಿ ಡಾನ್ ಮದುವೆ ಟಾಸ್ಕ್ ನಲ್ಲಿ ಪ್ರಶಾಂತ್ ಮತ್ತು ತಾಂಡವ್ ಭರಪೂರ ಮನರಂಜನೆ ಒದಗಿಸಿದ್ದರು. ಪ್ರಶಾಂತ್ ಈ ವಾರ ಅತ್ಯುತ್ತಮ ಪದಕವನ್ನೂ ಗೆದ್ದಿದ್ದಾರೆ. ಈ ವಾರ ಅವರಿಗೆ ಕಿಚ್ಚನ ಚಪ್ಪಾಳೆ ಗ್ಯಾರಂಟಿ ಎನ್ನಲಾಗುತ್ತಿದೆ. ಉಳಿದ ಸ್ಪರ್ಧಿಗಳು ಈ ವಾರ ಅಷ್ಟಾಗಿ ಕಾಣಿಸಿಕೊಂಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ: ಅಪ್ಪು ಸಮಾದಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ, ಕಣ್ಣೀರಿಟ್ಟ ಅಶ್ವಿನಿ