Select Your Language

Notifications

webdunia
webdunia
webdunia
webdunia

ಇದೀಗ ಮದುವೆ ಸೀಸನ್‌, ಮೆಹೆಂದಿ ಕೆಪ್ಪಾಗಲು ಈ ಟ್ರಿಕ್ಸ್ ಬಳಸಿ

Mehendi Color Tips
ಇದೀಗ ಮದುವೆ ಸೀಸನ್‌. ಮೆಹೆಂದಿಯನ್ನು ಹೆಚ್ಚಿನವರು ಹಾಕುತ್ತಾರೆ. ಇನ್ನೂ ಮೆಹೆಂದಿ (ಗೋರಂಟಿ) ಬಣ್ಣ ಗಾಢವಾಗಿ ಮತ್ತು ಕಪ್ಪಾಗಿ ಬರಲು ಇಲ್ಲಿವೆ ಕೆಲವು ಸುಲಭ ಹಾಗೂ ಪರಿಣಾಮಕಾರಿ ಸಲಹೆಗಳು:

1. ಹಚ್ಚುವ ಮೊದಲು ಮತ್ತು ಹಚ್ಚುವಾಗ

    ಕೈಗಳನ್ನು ಸ್ವಚ್ಛಗೊಳಿಸಿ: ಮೆಹೆಂದಿ ಹಚ್ಚುವ ಮೊದಲು ಕೈಗಳನ್ನು ಸೋಪಿನಿಂದ ತೊಳೆದು ಚೆನ್ನಾಗಿ ಒಣಗಿಸಿಕೊಳ್ಳಿ. ಕೈಗೆ ಯಾವುದೇ ಲೋಷನ್ ಅಥವಾ ಎಣ್ಣೆ ಹಾಕಬಾರದು.ಐಐ

    ನೀಲಗಿರಿ ಎಣ್ಣೆ: ಮೆಹೆಂದಿ ಹಚ್ಚುವ ಮೊದಲು ಕೈಗಳಿಗೆ ಸ್ವಲ್ಪ ನೀಲಗಿರಿ ಎಣ್ಣೆಯನ್ನು ಸವರಿಕೊಂಡರೆ ಬಣ್ಣ ಚೆನ್ನಾಗಿ ಹಿಡಿಯುತ್ತದೆ.

ಮೆಹೆಂದಿ ಒಣಗಿದ ನಂತರ ಮಾಡುವ ಟಿಪ್ಸ್‌:

 ಸಕ್ಕರೆ ಮತ್ತು ನಿಂಬೆ ರಸ: ಮೆಹೆಂದಿ ಸ್ವಲ್ಪ ಒಣಗಿದ ಮೇಲೆ, ಸಕ್ಕರೆ ಮತ್ತು ನಿಂಬೆ ರಸದ ಮಿಶ್ರಣವನ್ನು ಹತ್ತಿಯ ಸಹಾಯದಿಂದ ಮೆಹೆಂದಿಯ ಮೇಲೆ ಹಚ್ಚಿ. ಇದು ಮೆಹೆಂದಿ ಹೆಚ್ಚು ಹೊತ್ತು ಚರ್ಮಕ್ಕೆ ಅಂಟಿಕೊಂಡಿರಲು ಸಹಾಯ ಮಾಡುತ್ತದೆ.

    ಲವಂಗದ ಹಬೆ: ಒಂದು ಹಂಚಿನ ಮೇಲೆ 4-5 ಲವಂಗಗಳನ್ನು ಹಾಕಿ ಬಿಸಿ ಮಾಡಿ. ಆ ಬಿಸಿ ಲವಂಗದಿಂದ ಬರುವ ಹಬೆಗೆ ಮೆಹೆಂದಿ ಹಚ್ಚಿದ ಕೈಗಳನ್ನು ತೋರಿಸಿ. ಇದು ಬಣ್ಣ ಗಾಢವಾಗಲು ತುಂಬಾ ಸಹಕಾರಿ.


Share this Story:

Follow Webdunia kannada

ಮುಂದಿನ ಸುದ್ದಿ

ವೇಗದ ಜಗತ್ತಿನಲ್ಲಿ ಒತ್ತಡ ನಿವಾರಣೆಗೆ ಇಲ್ಲಿದೆ ಕೆಲ ಟಿಪ್ಸ್‌