Daily Horoscope

Select Your Language

Notifications

webdunia
webdunia
webdunia
webdunia

ಬೆಲೆ ಏರಿಕೆ ವಿರುದ್ಧ 3 ದಿನ ಪ್ರತಿಭಟನೆ

BY Vijayendra
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕೆ ಮಾಡುವ, ಪೋಸ್ಟ್ ಹಾಕುವವರ ಮೇಲೆಯೇ ಪ್ರಕರಣ ದಾಖಲಿಸಲಾಗುತ್ತಿದೆ. ಇದನ್ನು ಖಂಡಿಸಿ ಪೆÇಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿ ಪ್ರತಿಭಟನೆ ದಾಖಲಿಸಲಾಗುವುದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎನ್. ರವಿಕುಮಾರ್ ಅವರು ತಿಳಿಸಿದ್ದಾರೆ.
 
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಅವರು, ಮಾತನಾಡಿದರು. ರಾಜ್ಯದಲ್ಲಿನ ನಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಕಾರ್ಯಕರ್ತರು, ಹಿಂದೂ ಕಾರ್ಯಕರ್ತರು, ಸರ್ಕಾರದ ವಿರುದ್ಧ ಟೀಕೆ ಮಾಡಿದರೆ, ಸರ್ಕಾರದ ವಿರುದ್ಧ ಪೋಸ್ಟ್ ಹಾಕಿದರೆ ಪ್ರಕರಣ ದಾಖಲಿಸುತ್ತಾರೆ. ಅಲ್ಲದೇ, ಬೆಲೆ ಏರಿಕೆ, ಜನವಿರೋಧಿ ಸೇರಿದಂತೆ ಸರ್ಕಾರದ ನೀತಿಗಳ ವಿರುದ್ಧ ಪೋಸ್ಟ್ ಹಾಕಿದರೆ ಪ್ರಕರಣ ದಾಖಲಿಸುವ ಪ್ರಜಾಪ್ರಭುತ್ವ ವಿರೋಧ ಧೋರಣೆಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದೆ ಎಂದು ದೂರಿದರು.
 
ಎಸ್ಪಿ, ಡಿಸಿಪಿ ಸೇರಿದಂತೆ ಇತರ ಪೆÇಲೀಸ್ ಅಧಿಕಾರಿಗಳ ಗಮನಕ್ಕೆ ತಂದು ಕಾರ್ಯಕರ್ತರಿಂದ ಒಂದು ಲಕ್ಷ, ಎರಡು ಲಕ್ಷದ ಬಾಂಡ್ ಬರೆಸಿಕೊಳ್ಳಲಾಗುತ್ತಿದೆ. ಸರ್ಕಾರದ ವಿರುದ್ಧ ಟೀಕೆ ಮಾಡಲ್ಲ ಎಂದು ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಧಮ್ಕಿ ಹಾಕಿ, ಹೆದರಿಸಿ ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸಲಾಗುತ್ತಿದೆ. ಈಗಾಗಲೇ ನೋಟಿಸ್ ನೀಡಿದ್ದಾರೆ. ರಾಜ್ಯದ ಹಲವು ಭಾಗದಲ್ಲಿ ಇದು ನಡೆಯುತ್ತಾ ಇದೆ ಎಂದು ಟೀಕಿಸಿದರು.  
 
ಸರ್ಕಾರ ನಮ್ಮ ಕಾರ್ಯಕರ್ತರ ಮೇಲೆ ಇದೇ ರೀತಿ ದೂರು ದಾಖಲಿಸುವುದನ್ನು ಮುಂದುವರಿಸಿದರೆ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. 
 
ರಾಜ್ಯದಲ್ಲಿ  ಸರ್ಕಾರ ವಿಪರೀತವಾಗಿ ಬೆಲೆ ಏರಿಕೆ ಮಾಡುತ್ತಾ ಇದೆ. ಹಾಲಿಗೆ ಒಟ್ಟು ಲೀಟರ್‍ಗೆ 17 ರೂಪಾಯಿ ಏರಿಕೆ ಮಾಡಲಾಗಿದೆ. ಬಸ್ ಪ್ರಯಾಣದರ ಸಹ ಎರಡನೇ ಬಾರಿಗೆ ಏರಿಕೆ ಮಾಡಲಾಗಿದೆ. ಶೇ 40 ರಷ್ಟು ಏರಿಕೆ ಮಾಡಲಾಗಿದೆ. ಇದೂ ಪ್ರಜಾಪ್ರಭುತ್ವ ವಿರೋಧಿ ನಡೆ. ಬಡವರು, ಕೂಲಿಕಾರ್ಮಿಕರಿಗೆ ಇದರಿಂದ ತೊಂದರೆಯಾಗಿದೆ. ಬರ ಇದ್ದಾಗಲೂ ಈ ರೀತಿ ಬೆಲೆ ಏರಿಕೆ ಮಾಡುವುದು ಮನುಷ್ಯತ್ವ ವಿರೋಧಿ ಎಂದು ಆಕ್ಷೇಪಿಸಿದರು.  
 
ಬೆಲೆ ಏರಿಕೆ ಅಲ್ಲದೆ ಮಾಸಾಶನಗಳನ್ನೂ ಸರಿಯಾಗಿ ನೀಡುತ್ತಿಲ್ಲ. ವಿಧವೆಯರು, ಅಂಗವಿಕಲರು, ವೃದ್ಧರಿಗೆ ಮಾಸಾಶನ ನೀಡುತ್ತಿಲ್ಲ. ಸರ್ಕಾರದಲ್ಲಿ ಹಣ ಇಲ್ಲದೆ ಬಿಸಿಯೂಟ ಕಾರ್ಮಿಕರಿಗೆ ವೇತನ ನೀಡುತ್ತಿಲ್ಲ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ನೀಡುತ್ತಿಲ್ಲ. ರೈತರಿಗೆ ಬರ ಪರಿಹಾರ ಸಹ ನೀಡುತ್ತಿಲ್ಲ. ಕೆಲವೆಡೆ ಕೇವಲ 700 ರೂಪಾಯಿ ಕೊಟ್ಟಿದ್ದಾರೆ. ಇಡೀ ಸರ್ಕಾರವೇ ದಿವಾಳಿಯಾಗಿದೆ  ಎಂದು ದೂರಿದರು. 
 
ಮೂರು ದಿನ ಪ್ರತಿಭಟನೆ..
ಬೆಲೆ ಏರಿಕೆ ವಿರುದ್ಧ ಇದೇ 23 ರಿಂದ 25 ರವರೆಗೆ ಮೂರು ದಿನ ರಾಜ್ಯದಾದ್ಯಂತ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಇದಕ್ಕಾಗಿ ಜಿಲ್ಲೆಗಳಲ್ಲಿ ತಯಾರಿ ಸಭೆ ಮಾಡಲಾಗುವುದು. ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ನೀಡಲಾಗುವುದು ಎಂದರು. 
 
ರಾಜ್ಯದಲ್ಲಿ ಭ್ರಷ್ಟಾಚಾರ  ಮಿತಿಮೀರಿದೆ. ಬಿಜೆಪಿ ಸರ್ಕಾರದ ವಿರುದ್ಧ ಶೇ 40 ಭ್ರಷ್ಟಾಚಾರ ಆರೋಪ ಮಾಡಿದ್ದರು. ಅದನ್ನು ಸಾಬೀತು ಮಾಡಲು ಆಗಲಿಲ್ಲ. ಆದರೆ ಈ ಸರ್ಕಾರದ ವಿರುದ್ಧ ಶೇ 60 ರಷ್ಟು ಭ್ರಷ್ಟಾಚಾರ ಆರೋಪ ಬಂದಿದೆ. ಗುತ್ತಿಗೆದಾರರು ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು. 
 
ಅಧಿವೇಶನದಲ್ಲಿನ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಶಾಸಕರ ಸಭೆ ಸಹ ಮಾಡಲಾಗುವುದು. ಬೆಳಗಾವಿ ಅಧಿವೇಶನದಲ್ಲಿ ಬೆಲೆ ಏರಿಕೆ ವಿರುದ್ಧ, ರೈತ ವಿರೋಧಿ ಸರ್ಕಾರದ ವಿರುದ್ಧ ರೈತರ ಪರವಾಗಿ ನಿಲ್ಲುತ್ತೇವೆ. ಯಾವ ರೀತಿಯ ಪ್ರತಿಭಟನೆ ಎಂಬುದನ್ನು ರೂಪಿಸುತ್ತೇವೆ ಎಂದು ಹೇಳಿದರು. 
 
ಕೇಂದ್ರದಲ್ಲಿ ರಾಹುಲ್ ಗಾಂಧಿ ಪಪ್ಪು ಒನ್ ಆದರೆ ರಾಜ್ಯದಲ್ಲಿ ಪಪ್ಪು 2 ಪ್ರಿಯಾಂಕ್ ಖರ್ಗೆ. ಫೆÇೀನ್ ಕದ್ದಾಲಿಕೆ ಬಗ್ಗೆ ಪ್ರಿಯಾಂಕ್ ಅವರು ಆರೋಪಿಸುತ್ತಿದ್ದಾರೆ. ಯಾರು ಕದ್ದಾಲಿಕೆ ಮಾಡುತ್ತಿದ್ದಾರೆ ಎಂಬುದನ್ನು ಬಿಡುಗಡೆ ಮಾಡಲಿ. ಇವರಿಗೆ ಮಾತನಾಡುವ ವಿಷಯದ ಬಗ್ಗೆಯೇ ಪರಿಜ್ಞಾನವೇ ಇಲ್ಲ. ರಾಹುಲ್ ಗಾಂಧಿ ಅವರು ಮೋದಿ ಅವರ ವಿರುದ್ಧ ಕದ್ದಾಲಿಕೆ ಆರೋಪ ಮಾಡ್ತಾ ಇದ್ದಾರೆ. ಇದನ್ನು ಹೇಳಲು ನಾಚಿಕೆಯಾಗಬೇಕು.  ಪ್ರಧಾನಿ ಸ್ಥಾನ, ಆಡಳಿತದ ಬಗ್ಗೆ ತಿಳಿಯಬೇಕು. ರಾಹುಲ್ ಗಾಂಧಿ ಅವರು ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಸಫಾರಿ ಮೋಜಿಗಾಗಿ ಬೈಕ್ ನಲ್ಲಿ ಸಿಂಹಗಳನ್ನೇ ಬೆನ್ನಟ್ಟಿದ್ರು: ನೆಟ್ಟಿಗರ ಭಾರೀ ಆಕ್ರೋಶ Video