Publish Date: Mon, 09 Nov 2026 (16:03 IST)
Updated Date: Sun, 08 Nov 2026 (21:52 IST)
ದೀಪಾವಳಿ ಮತ್ತು ಇತರ ಸಾಂಸ್ಕೃತಿಕ ಆಚರಣೆಗಳ ಸಂದರ್ಭದಲ್ಲಿ ಪಟಾಕಿ ಸಿಡಿಸುವುದು ಸಾಮಾನ್ಯ. ಆದರೆ ಪಟಾಕಿಗಳಿಂದ ಹೊರಹೊಮ್ಮುವ ದಟ್ಟವಾದ ಹೊಗೆ ಮತ್ತು ಅದರಲ್ಲಿರುವ ಹಾನಿಕಾರಕ ರಾಸಾಯನಿಕಗಳು (ಸಲ್ಫರ್ ಡೈಆಕ್ಸೈಡ್, ನೈಟ್ರಸ್ ಆಕ್ಸೈಡ್ ಮತ್ತು ಭಾರಲೋಹಗಳ ಕಣಗಳು) ಗಾಳಿಯ ಗುಣಮಟ್ಟವನ್ನು ತೀವ್ರವಾಗಿ ಹಾಳುಮಾಡುತ್ತವೆ. ಈ ಕಲುಷಿತ ಗಾಳಿಯನ್ನು ಉಸಿರಾಡುವುದರಿಂದ ಶೀತ, ಸತತ ಕೆಮ್ಮು, ಗಂಟಲು ಕಿರಿಕಿರಿ, ಅಲರ್ಜಿ ಹಾಗೂ ಉಸಿರಾಟದ ತೊಂದರೆಗಳು (ಆಸ್ತಮಾ) ಕಾಣಿಸಿಕೊಳ್ಳುತ್ತವೆ.
ಪಟಾಕಿ ಹೊಗೆಯ ದುಷ್ಪರಿಣಾಮಗಳಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಅನುಸರಿಸಬೇಕಾದ ಪ್ರಮುಖ ಮಾರ್ಗಗಳು ಇಲ್ಲಿವೆ.
ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯ
ಪಟಾಕಿ ಸಿಡಿಸುವ ಸ್ಥಳಗಳಲ್ಲಿ ಸಂಚರಿಸುವಾಗ ಅಥವಾ ಮನೆಯಿಂದ ಹೊರಹೋಗುವಾಗ ಕಡ್ಡಾಯವಾಗಿ N95 ಮಾಸ್ಕ್ ಧರಿಸಿ. ಸಾಮಾನ್ಯ ಬಟ್ಟೆಯ ಮಾಸ್ಕ್‌ಗಳಿಗಿಂತ N-95 ಮಾಸ್ಕ್‌ಗಳು ಗಾಳಿಯಲ್ಲಿರುವ ಅತಿ ಸೂಕ್ಷ್ಮ ರಾಸಾಯನಿಕ ಕಣಗಳನ್ನು (PM 2.5) ಶ್ವಾಸಕೋಶ ಸೇರದಂತೆ ತಡೆಯುವಲ್ಲಿ ಹೆಚ್ಚು ಪರಿಣಾಮಕಾರಿ.
ಮನೆ ಒಳಗಿನ ಗಾಳಿಯ ಶುದ್ಧತೆ ಕಾಪಾಡಿ
ಹೊಗೆ ಹೆಚ್ಚಾಗಿರುವ ಸಂಜೆ ಮತ್ತು ರಾತ್ರಿ ವೇಳೆಯಲ್ಲಿ ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ಮುಚ್ಚಿಡಿ.
ಸಾಧ್ಯವಿದ್ದಲ್ಲಿ ಮನೆಯೊಳಗೆ 'ಏರ್ ಪ್ಯೂರಿಫೈಯರ್' ಬಳಸಿ.
ಮನೆಯ ವಾತಾವರಣವನ್ನು ತೇವವಾಗಿಡಲು ಮತ್ತು ಗಾಳಿಯನ್ನು ಶುದ್ಧೀಕರಿಸಲು ಉಗಿ ಹಿಡಿಯುವ ಯಂತ್ರ ಅಥವಾ ಹ್ಯುಮಿಡಿಫೈಯರ್ ಬಳಸಬಹುದು.
ಉಗಿ ತೆಗೆದುಕೊಳ್ಳುವುದು
ದಿನದಲ್ಲಿ 1-2 ಬಾರಿಯಾದರೂ ಬಿಸಿ ನೀರಿನ ಉಗಿ ತೆಗೆದುಕೊಳ್ಳಿ. ನೀರಿಗೆ ಸ್ವಲ್ಪ ತುಳಸಿ ಎಲೆ, ಅರಿಶಿನ ಅಥವಾ ನೀಲಗಿರಿ ಎಣ್ಣೆಯನ್ನು ಸೇರಿಸಿ ಉಗಿ ತಗೆದುಕೊಳ್ಳುವುದರಿಂದ ಶ್ವಾಸಕೋಶ ಮತ್ತು ಉಸಿರಾಟದ ಮಾರ್ಗದಲ್ಲಿ ಜಮೆಯಾಗಿರುವ ಕಲುಷಿತ ಕಣಗಳು ಹೊರಹೋಗಿ ಗಂಟಲು ನೋವು ಹಾಗೂ ಕೆಮ್ಮು ಶಮನವಾಗುತ್ತದೆ.
ಬಿಸಿ ನೀರು ಮತ್ತು ಕಷಾಯ ಸೇವನೆ
ದಿನಪೂರ್ತಿ ಉಗುರುಬಿಸಿ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ಗಂಟಲಿನಲ್ಲಿರುವ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.
ಅರಿಶಿನ ಹಾಲು, ಶಂಟಿ-ತುಳಸಿ ಕಷಾಯ ಅಥವಾ ಶುಂಠಿ-ಜೇನುತುಪ್ಪದ ಮಿಶ್ರಣವನ್ನು ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಕೆಮ್ಮಿನಿಂದ ತ್ವರಿತ ಶಮನ ಸಿಗುತ್ತದೆ.
ಕಣ್ಣು ಮತ್ತು ಮುಖದ ಸ್ವಚ್ಛತೆ
ಪಟಾಕಿ ಹೊಗೆ ತಾಗಿದ ತಕ್ಷಣ ಮನೆಗೆ ಬಂದು ಮುಖ ಮತ್ತು ಕಣ್ಣುಗಳನ್ನು ತಂಪಾದ ನೀರಿನಿಂದ ಚೆನ್ನಾಗಿ ತೊಳೆಯಿರಿ. ಉಗುರುಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಗಂಟಲು ಮುಕ್ಕಳಿಸುವುದರಿಂದ ಸೋಂಕು ತಡೆಯಬಹುದು.
ಆಸ್ತಮಾ ಹಾಗೂ ಅಲರ್ಜಿ ರೋಗಿಗಳಿಗೆ ಮುನ್ನೆಚ್ಚರಿಕೆ
ಉಸಿರಾಟದ ತೊಂದರೆ, ಆಸ್ತಮಾ ಅಥವಾ ಸೈನಸ್ ಸಮಸ್ಯೆಯಿಂದ ಬಳಲುತ್ತಿರುವವರು ಪಟಾಕಿ ಹೊಗೆಯಿಂದ ಸಂಪೂರ್ಣವಾಗಿ ದೂರವಿರಬೇಕು. ಇನ್ಹೇಲರ್ ಬಳಸುವವರು ತಮ್ಮ ಔಷಧಗಳನ್ನು ಸದಾ ಜೊತೆಯಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ.
ಸಾಧ್ಯವಾದಷ್ಟು ಹಸಿರು ಪಟಾಕಿಗಳನ್ನು ಬಳಸುವುದು ಅಥವಾ ಪಟಾಕಿರಹಿತ ಪರಿಸರ ಸ್ನೇಹಿ ಆಚರಣೆಗೆ ಒತ್ತು ನೀಡುವುದು ನಿಮ್ಮ ಮತ್ತು ನಿಮ್ಮ ಸುತ್ತಮುತ್ತಲಿನವರ ಆರೋಗ್ಯಕ್ಕೆ ಶ್ರೇಯಸ್ಕರ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ