Select Your Language

Notifications

webdunia
webdunia
webdunia
webdunia

ಮೊದಲ ಪತ್ನಿಗೆ ಕೈಕೊಟ್ಟು ಎರಡನೇ ಮದುವೆಗೆ ಸಿದ್ಧರಾದರಾ ‘ಅಗ್ನಿಸಾಕ್ಷಿ’ ಧಾರವಾಹಿಯ ರಾಜೇಶ್ ಧ್ರುವ?!

ಮೊದಲ ಪತ್ನಿಗೆ ಕೈಕೊಟ್ಟು ಎರಡನೇ ಮದುವೆಗೆ ಸಿದ್ಧರಾದರಾ ‘ಅಗ್ನಿಸಾಕ್ಷಿ’ ಧಾರವಾಹಿಯ ರಾಜೇಶ್ ಧ್ರುವ?!
ಬೆಂಗಳೂರು , ಶುಕ್ರವಾರ, 22 ಫೆಬ್ರವರಿ 2019 (12:54 IST)
ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ‘ಅಗ್ನಿಸಾಕ್ಷಿ’ಯ ಅಖಿಲ್ ಅಲಿಯಾಸ್ ರಾಜೇಶ್ ಧ್ರುವ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ.


ಕಿರುತೆರೆಯ ಈ ಜನಪ್ರಿಯ ನಟ ಇದೀಗ ಮೊದಲ ಪತ್ನಿಗೆ ಕೈಕೊಟ್ಟು ಎರಡನೇ ಮದುವೆಗೆ ತಯಾರಿ ನಡೆಸಿರುವ ಆರೋಪ ಕೇಳಿಬಂದಿದೆ. ರಾಜೇಶ್ ಮೊದಲ ಪತ್ನಿ ಶ್ರುತಿ ಈ ಸಂಬಂಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೀಗ ಬಂಧನ ಭೀತಿಯಲ್ಲಿರುವ ನಟ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ರಾಜೇಶ್ ಮತ್ತು ಅವರ ತಾಯಿ ತಮಗೆ ಗೃಹ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಮತ್ತು ಮನೆಯಿಂದ ಹೊರ ಹಾಕಿದ್ದಾರೆ ಎಂದು ಶ್ರುತಿ ಖಾಸಗಿ ವಾಹಿನಿಗೆ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ನಟ ರಾಜೇಶ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯ..! ಕನ್ನಡತಿ ಎಂದು ನಿಮಗೆ ಇನ್ನೂ ನೆನಪಿದೆಯಲ್ವಾ? ರಮ್ಯಾಗೆ ಟಾಂಗ್