ದುಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂದು ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಬೌಲರ್ ಅಕ್ಸರ್ ಪಟೇಲ್ ಗೆ ಹ್ಯಾಟ್ರಿಕ್ ವಿಕೆಟ್ ಗಳಿಸುವ ಅವಕಾಶ ನಾಯಕ ರೋಹಿತ್ ಶರ್ಮಾರಿಂದ ಮಿಸ್ ಆಯಿತು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಟಾಸ್ ಗೆದ್ದ ಬಾಂಗ್ಲಾದೇಶ ಇಂದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಟೀಂ ಇಂಡಿಯಾ ಬೌಲರ್ ಗಳ ಕರಾರುವಾಕ್ ದಾಳಿಯ ಎದುರು ಬಾಂಗ್ಲಾ ಬೌಲರ್ ಗಳು ತತ್ತರಿಸಿದರು. ಇತ್ತೀಚೆಗಿನ ವರದಿ ಬಂದಾಗ ಬಾಂಗ್ಲಾ 86 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.
ಇಂದು ಅಕ್ಸರ್ ಪಟೇಲ್ ತಾವು ದಾಳಿಗಿಳಿದ ಮೊದಲ ಓವರ್ ನ ಎರಡನೇ ಬಾಲ್ ನಲ್ಲೇ ವಿಕೆಟ್ ಗಳಿಸಿದರು. ನಂತರದ ಬಾಲ್ ನಲ್ಲೂ ಅಕ್ಸರ್ ವಿಕೆಟ್ ಗಳಿಸಿದರು. ಈ ಮೂಲಕ ಅವರಿಗೆ ಹ್ಯಾಟ್ರಿಕ್ ಗಳಿಸುವ ಸುವರ್ಣಾವಕಾಶವಿತ್ತು.
ಅದರಂತೆ ಮೂರನೇ ಬಾಲ್ ನಲ್ಲೂ ಅಕ್ಸರ್ ಗೆ ವಿಕೆಟ್ ಸಿಗಬೇಕಿತ್ತು. ಆದರೆ ರೋಹಿತ್ ಶರ್ಮಾ ಕ್ಯಾಚ್ ನೆಲಕ್ಕೆ ಹಾಕಿ ಆ ಸುವರ್ಣಾವಕಾಶವನ್ನು ತಪ್ಪಿಸಿದರು. ಅಕ್ಸರ್ ಪಟೇಲ್ ಮಾತ್ರವಲ್ಲದೆ, ಅಭಿಮಾನಿಗಳೂ ತೀವ್ರ ನಿರಾಸೆಗೊಳಗಾದರು.
ಅಕ್ಸರ್ ಪಟೇಲ್ ಗೆ ಸಿಗಬೇಕಾಗಿದ್ದ ಹ್ಯಾಟ್ರಿಕ್ ವಿಕೆಟ್ ಕೈ ಚೆಲ್ಲಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಹಿತ್ ಶರ್ಮಾರ ಉದಾಸೀನ ಪ್ರವೃತ್ತಿಯಿಂದಲೇ ಹೀಗಾಗಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.