ಬೆಂಗಳೂರು: ಪರಪ್ಪನ ಅಗ್ರಹಾರದ ವಿಡಿಯೋ ವೈರಲ್ ಸಂಬಂಧ ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಷ್ಟ ಎದುರಾಗಿದೆ.
ಜೈಲಿನಲ್ಲಿ ಉಗ್ರ ಹಾಗೂ ಇತರ ಖೈದಿಗಳಿಗೆ ರಾಜಾತಿಥ್ಯ ನೀಡಿದ ವಿಡಿಯೋ ವೈರಲ್ ಸಂಬಂಧ ದರ್ಶನ್ ಆಪ್ತ ಧನ್ವೀರ್‌ನನ್ನು ಪೊಲೀಸರು ವಿಚಾರಣೆ ನಡೆಸಿದ್ದರು.
ಈ ಸಂದರ್ಭದಲ್ಲಿ ಧನ್ವೀರ್ ನೀಡಿರುವ ಹೇಳಿಕೆ ವಿಜಯಲಕ್ಷ್ಮಿಗೆ ಸಂಕಷ್ಟ ತಂದಿದೆ. ಎರಡನೇ ಬಾರೀ ಪೊಲೀಸರ ವಿಚಾರಣೆಗೆ ಒಳಪಟ್ಟ ಸಂದರ್ಭದಲ್ಲಿ ಧನ್ವೀರ್ ಅವರು ವಕೀಲರೊಬ್ಬರಿಂದ ನನಗೆ ಜೈಲಿನ ವಿಡಿಯೋ ಬಂದಿತ್ತು. ನಾನು ವಿಜಯಲಕ್ಷ್ಮೀಗೆ ವಿಡಿಯೋ ಕಳಿಸಿದ್ದಾಗಿ ಹೇಳಿಕೆ ನೀಡಿದ್ದಾನೆ. ಅದಲ್ಲದೆ ನನಗೂ ಈ ವಿಡಿಯೋ ವೈರಲ್‌ಗೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಏನಿದು ಪ್ರಕರಣ: ಪರಪ್ಪನ ಅಗ್ರಹಾರದಲ್ಲಿ ಐಸಿಎಸ್ ಉಗ್ರ ಸೇರಿದಂತೆ ಕೊಲೆ, ಅತ್ಯಾಚಾರ ಪ್ರಕರಣದ ಆರೋಪಿಗಳು ಮೊಬೈಲ್ ಬಳಸುತ್ತಿರುವುದು, ಎಂಜಾಯ್ ಮಾಡುತ್ತಿರುವ ವಿಡಿಯೋಗಳು ಲೀಕ್ ಆಗಿತ್ತು. ಇದು ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿತು.
ಇದನ್ನು ದರ್ಶನ್ ಆಪ್ತ ಧನ್ವೀರ್ ಅವರೇ ಲೀಕ್ ಮಾಡಿದ್ದರು ಎಂಬ ಸಂಶಯದಡಿಯಲ್ಲಿ ಅವರನ್ನು ವಿಚಾರಣೆ ನಡೆಸಲಾಯಿತು.