ಬೆಂಗಳೂರು: ನಟ ದರ್ಶನ್ ಅವರನ್ನು ಹೊರತರಲು ವಿಜಯಲಕ್ಷ್ಮಿ ಅಕ್ಕ ಒಬ್ಬಂಟಿಯಾಗಿ ಮಾಡುತ್ತಿರುವ ಹೋರಾಟ ನೋಡಿ, ನಾನು ಅವರ ಜತೆ ನಿಂತೆ ಎಂದು ನಟ ಧನ್ವೀರ್ ಹೇಳಿದ್ದಾರೆ.
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದ ವೇಳೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಟ ಧನ್ವೀರ್ ಅವರು ಪ್ರತೀ ಹೆಜ್ಜೆಯಲ್ಲೂ ದರ್ಶನ್ ಪರ ನಿಮತು ಹೋರಾಟ ಮಾಡಿದ್ದಾರೆ. ಜೈಲಿನಲ್ಲಿದ್ದಾಗ ಪ್ರತೀ ವಾರ ಜೈಲಿಗೆ ಹೋಗಿ ದರ್ಶನ್‌ಗೆ ಸಮಾಧಾನ ಹೇಳುತ್ತಿದ್ದರು. ಅದಲ್ಲದೆ ಜೈಲಿಂದ್ದ ಹೊರಬಂದ್ಮೇಲೂ ದರ್ಶನ್ ಅವರೊಂದಿಗೆ ಕಾಲ ಕಳೆಯುತ್ತಿದ್ದಾರೆ.
ಇದೀಗ ಧನ್ವೀರ್ ತಮ್ಮ ಮುಂದಿನ ವಾಮನ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ 10ರಂದು ಅವರು ನಾಯಕನಾಗಿ ಅಭಿನಯಿಸಿರುವ ವಾಮನ ಸಿನಿಮಾ ಬಿಡುಗಡೆಯಾಗಲಿದೆ. ಮಾಧ್ಯಮವೊಂದರ ಸಂದರ್ಶನದಲ್ಲಿ ದರ್ಶನ್ ಅವರೊಂದಿಗಿನ ಬಾಂಧವ್ಯದ ಬಗ್ಗೆ ಕೇಳಿದಾಗ, ಅವರು ಎಲ್ಲರನ್ನೂ ತನ್ನವರೆಂದು ಬಾಚಿಕೊಂಡು ನಮ್ಮನ್ನು ನೋಡಿಕೊಂಡಿದ್ದರು. ಆದರೆ ಅವರಿಗೆ ಕಷ್ಟ ಅಂತಾ ಬಂದಾಗ ಎಲ್ಲರೂ ದೂರವಾದರೂ. ಹಾಗೇ ಮಾಡಬಾರದು.
ಒಂದು ಹೆಣ್ಣಾಗಿ, ವಿಜಯಲಕ್ಷ್ಮಿ ಅಕ್ಕ ಅವರು ತಮ್ಮ ಪತಿಯನ್ನು ಇದರಿಂದ ಹೊರತರಲು ಮಾಡಿದ ಹೋರಾಟ ನೋಡಿ ನಾನು ಅವರೊಂದಿಗೆ ನಿಂತೆ. ದರ್ಶನ್ ಅವರ ಪರ ಯಾವಾಗಲೂ ನಿಲ್ಲುತ್ತೇನೆ ಎಂದರು.