ಬೆಂಗಳೂರು: ನಟ ದರ್ಶನ್ ಅವರು ಜೈಲಿನಿಂದ ಹೊರಬಂದ್ಮೇಲೆ ಅವರು ಪತ್ನಿ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಫುಲ್ ಆಕ್ಟೀವ್ ಆಗಿದ್ದು, ಆಗಾಗ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.
ನಟ ದರ್ಶನ್ ಅವರು ಜಾಮೀನು ಪಡೆದು ಜೈಲಿಂದ್ದ ಹೊರಬಂದ್ಮೇಲೆ ಸದ್ಯ ಫ್ಯಾಮಿಲಿ ಜತೆ ಟೈಮ್ ಕಳೆಯುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಹಾಗೂ ವಿನೀಶ್ ಜತೆ ದರ್ಶನ್ ಅವರು ತಮ್ಮ ಫಾರ್ಮ್‌ಹೌಸ್‌ನಲ್ಲಿ ಟೈಮ್ ಪಾಸ್ ಮಾಡುತ್ತಿದ್ದಾರೆ. ಅದಲ್ಲದೆ ಈಚೆಗೆ ಕಣ್ಣೂರಿನ ಫವರ್‌ಫುಲ್ ಭಗವತಿ ದೇವಸ್ಥಾನಕ್ಕೆ ದರ್ಶನ್ ತಮ್ಮ ಫ್ಯಾಮಿಲಿ ಜತೆ ಭೇಟಿ ನೀಡಿದ್ದರು.
ಇದೀಗ ವಿಜಯಲಕ್ಷ್ಮಿ ಅವರು ತಮ್ಮ ಫ್ಯಾಮಿಲಿ ಫೋಟೋವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಅಭಿಮನ್ಯು ಆನೆ ಎದುರು ವಿಜಯಲಕ್ಷ್ಮಿ, ದರ್ಶನ್ ಹಾಗೂ ವಿನೀಶ್ ನಿಂತು ಫೋಟೋಗೆ ಫೋಸ್ ನೀಡಿದ್ದಾರೆ.
ಇದನ್ನು ನೋಡಿದ ದರ್ಶನ್ ಅಭಿಮಾನಿಗಳು ಯಾರ ಕೆಟ್ಟ ದೃಷ್ಟಿಯೂ ಈ ಸುಂದರ ಕುಟುಂಬದ ಮೇಲೆ ಬೀಳದಿರಲಿ ಎಂದು ಹಾರೈಸಿದ್ದಾರೆ. ಸದ್ಯ ದರ್ಶನ್ ಅವರ ಮುಂದಿನ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ.