ಬೆಂಗಳೂರು: ದಿಢೀರನೇ ನಟ ದರ್ಶನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುಮಲತಾ ಅಂಬರೀಶ್ ಅವರನ್ನು ಅನ್‌ಫಾಲೋ ಮಾಡುವ ಮೂಲಕ ಕುತೂಹಲ ಮೂಡಿಸಿದ ಬೆನ್ನಲ್ಲೇ ಸುಮಲತಾ ಅವರ ಪೋಸ್ಟ್ ಇದೀಗ ಿವರಿಬ್ಬರ ಮಧ್ಯೆ ಸರಿಯಿಲ್ಲ ಎಂಬ ಸುದ್ದಿ ಹರಿದಾಡಿದೆ.
ಈ ವಿಚಾರವಾಗಿ ಸುಮಲತಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ದರ್ಶನ್ ಯಾವತ್ತಿದ್ದರೂ ನನ್ನ ಮಗನೇ. ನಮ್ಮ ಮಧ್ಯೆ ಯಾವುದೇ ಮುನಿಸಿಲ್ಲ. ನಾನು ಸಾಮಾನ್ಯವಾಗಿ ಬದುಕಿನ ಬಗ್ಗೆ ಪೋಸ್ಟ್ ಹಾಕುತ್ತಿರುತ್ತೇನೆ. ಇದಕ್ಕೂ ದರ್ಶನ್‌ಗೂ ಯಾವುದೇ ಸಂಬಂಧವಿಲ್ಲ ಎಂದರು.
ಇದೆಲ್ಲಾ ಅನಗತ್ಯವಾದ ವಿವಾದ. ಯಾರು ನನ್ನನ್ನು ಫಾಲೋ ಮಾಡುತ್ತಾರೆ ಅಥವಾ ಅನ್‌ಫಾಲೋ ಮಾಡುತ್ತಾರೆ ಎಂಬುದನ್ನು ಗಮನಿಸುವ ಅಭ್ಯಾಸ ಹೊಂದಿಲ್ಲ. ಅದಲ್ಲದೆ ದರ್ಶನ್ ಅವರು ತಮ್ಮ ಮಗನನ್ನು ಅನ್‌ಫಾಲೋ ಮಾಡಿದ್ದಾನೆ. ಹಾಗಂತ ಅವರಿಬ್ಬರ ಮಧ್ಯೆ ಸರಿ ಇಲ್ವಾ ಅಂತಾ ಅರ್ಥನಾ ಎಂದು ಪ್ರಶ್ನೆ ಮಾಡಿದರು.
ನಾನು ಯಾರನ್ನು ಟಾರ್ಗೆಟ್ ಮಾಡಿ, ಯಾರನ್ನು ಉದ್ದೇಶಿಸಿ ಪೋಸ್ಟ್ ಹಾಕಲ್ಲ. ಇನ್ನೂ ದರ್ಶನ್ ಬಗ್ಗೆ ನಾನು ನೆಗೆಟಿವ್ ಮಾತನಾಡುತ್ತೇನಾ? ದರ್ಶನ್ ಯಾವಾತ್ತಿದ್ದರೂ ನನ್ನ ಮಗ ಅಂತ ಮೊದಲಿನಿಂದಲೂ ಹೇಳುತ್ತಲೇ ಇದ್ದೇನೆ. ಅದು ಅವತ್ತಿಗೂ ಅಷ್ಟೇ, ಇವತ್ತಿಗೂ ಅಷ್ಟೇ. ನನ್ನ ಪ್ರೀತಿ ಮತ್ತು ಅಭಿಮಾನ ಯಾವತ್ತಿಗೂ ಒಂದೇ ತರಹ ಇರುತ್ತದೆ. ಆ ಪೋಸ್ಟ್‌ಗೂ, ದರ್ಶನ್‌ಗೂ ಯಾವುದೇ ಸಂಬಂಧವಿಲ್ಲ.
ಇನ್ನೂ ಮೊಮ್ಮಗನ ನಾಮಕರಣಕ್ಕೆ ದರ್ಶನ್ ಅವರನ್ನು ಆಹ್ವಾನಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದರ್ಶನ್‌ರನ್ನು ಆಹ್ವಾನಿಸದೆ ಎಂದೂ ಯಾವ ಕಾರ್ಯಕ್ರಮವನ್ನು ಮಾಡಿಲ್ಲ, ಮಾಡುವುದಿಲ್ಲ ಎಂದು ಹೇಳಿದರು.