ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಮೂಲಕ ಹೊರಬಂದಿರುವ ಪವಿತ್ರಾ ಗೌಡ ಅವರು ಪ್ರೇಮಿಗಳ ದಿನದಂದು ತಮ್ಮ ಜೀವನದ ಪ್ರಮುಖ ಹೆಜ್ಜೆಯನ್ನಿಟ್ಟಿದ್ದಾರೆ.
ಪ್ರಕರಣದಿಂದ ಜಾಮೀನು ಮೂಲಕ ಹೊರಬಂದ ಬಳಿಕ ಪವಿತ್ರಾ ಗೌಡ ಅವರು ಶಿರಡಿ ಸಾಯಿ ಬಾಬಾ ಹಾಗೂ ಮಹಾಕುಂಭಮೇಳದಲ್ಲಿ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದರು. ಈ ಎಲ್ಲ ಕ್ಷಣಗಳನ್ನು ಪವಿತ್ರಾ ಗೌಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದರು.
ಈಚೆಗೆ ಸೀರೆಯುಟ್ಟು ರೀಲ್ಸ್‌ನ್ನು ಶೇರ್ ಮಾಡಿದ್ದರು. ಈ ಹಿಂದೆಯೇ ಪವಿತ್ರಾ ಗೌಡ ಸ್ವಂತ ರೆಡ್ ಕಾರ್ಪೆಟ್ ಸ್ಟೂಡಿಯೋವನ್ನು ನಡೆಸುತ್ತಿದ್ದರು. ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಸ್ಟೂಡಿಯೋವನ್ನು ಮುಚ್ಚಲಾಗಿತ್ತು.
ಇದೀಗ ಮತ್ತೇ ಈ ಸ್ಟೂಡಿಯೋವನ್ನು ತೆರೆದಿದ್ದಾರೆ. ಪ್ರೇಮಿಗಳ ದಿನದಂದು ತಮ್ಮ ಸ್ಟೂಡಿಯೋವನ್ನು ತೆರೆಯುವ ಮೂಲಕ ಬ್ಯುಸಿನೆಸ್ ಕಡೆ ಮುಖ ಮಾಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಿದ ಪವಿತ್ರಾ ಗೌಡ, ಹ್ಯಾಪಿ ವೈಲೆಂಟೈನ್ಸ್ ಡೇ, ನಮ್ಮ ಸ್ಟುಡಿಯೋ ಇದೀಗ ತೆರೆದಿದೆ ಎಂದು ಬರೆದುಕೊಂಡಿದ್ದಾರೆ.
ಒಟ್ಟಾರೆ ಪ್ರೇಮಿಗಳ ದಿನದಂದೆ ಪವಿತ್ರಾ ಗೌಡ ತಮ್ಮ ಸ್ಟುಡಿಯೋವನ್ನು ರೀಲಾಂಚ್ ಮಾಡಿದ್ದಾರೆ. ರೀಲಾಂಚ್ ಇವೆಂಟ್‌ಗೆ ಸೀರೆಯಲ್ಲಿ ಸಖತ್ ರೆಡಿಯಾಗಿ ಬಂದಿದ್ದಾರೆ.