ಆಂಧ್ರಪ್ರದೇಶ: 2004 ರಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದ ಬಹುಭಾಷಾ ನಟಿ ಸೌಂದರ್ಯ ದುರಂತ ಸಾವಿನ ಬಗ್ಗೆ ವಿವಾನಟಿ ಸೌಮ್ಯ ಸತ್ಯನಾರಾಯಣ ಅವರ ದುರಂತ ಸಾವಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಖ್ಯಾತ ನಟ ಮೋಹನ್ ಬಾಬು ವಿರುದ್ಧ ದೂರು ದಾಖಲಾಗಿದೆ.
ಈಚೆಗೆ ಆಂಧ್ರಪ್ರದೇಶದ ಖಮ್ಮಮ್ ಜಿಲ್ಲೆಯಲ್ಲಿ ಹಿರಿಯ ತೆಲುಗು ನಟ ಮೋಹನ್ ಬಾಬು ಅವರು ಸೌಂದರ್ಯ ಅವರು ಸಾವು ಅಪಘಾತವಲ್ಲ, ಬದಲಿಗೆ ಆಸ್ತಿ ವಿವಾದಕ್ಕೆ ಸಂಬಂಧಿಸಿದ್ದು ಎಂದು ಹೇಳಿಕೆ ನೀಡಿದ್ದರು. ಇದು ಭಾರೀ ಚರ್ಚೆಯನ್ನು ಹುಟ್ಟುಹಾಕಿತು. ಇದೀಗ ನಟನ ವಿರುದ್ದ ಸಾಮಾಜಿಕ ಕಾರ್ಯಕರ್ತ ಚಿಟ್ಟಿಮಲ್ಲು ಅವರು ದೂರು ನೀಡಿದ್ದಾರೆ.
ದೂರಿನಲ್ಲಿ ಮೋಹನ್ ಬಾಬು ಅವರು ಸೌಂದರ್ಯ ಮತ್ತು ಅವರ ಸಹೋದರನ ಮೇಲೆ 6ಎಕರೆ ಭೂಮಿಯನ್ನು ಮಾರಾಟ ಮಾಡುವಂತೆ ಒತ್ತಡ ಹೇರಿದ್ದಾರೆ. ಅವರು ನಿರಾಕರಿಸಿದಾಗ, ಇಬ್ಬರು ನಟರ ನಡುವೆ ಉದ್ವಿಗ್ನತೆ ಹೆಚ್ಚಾಯಿತು. ಸೌಂದರ್ಯ ಅವರ ಮರಣದ ನಂತರ, ಮೋಹನ್ ಬಾಬು ಭೂಮಿಯನ್ನು ಸ್ವಾಧೀನಪಡಿಸಿಕೊಂಡರು ಎಂದು ಆರೋಪಿಸಿದ್ದಾರೆ.
ಏಪ್ರಿಲ್ 17, 2004 ರಂದು ರಾಜಕೀಯ ಕಾರ್ಯಕ್ರಮಕ್ಕಾಗಿ ಕರೀಂನಗರಕ್ಕೆ ಪ್ರಯಾಣಿಸುತ್ತಿದ್ದಾ, ವಿಮಾನ ಅಪಘಾತದಲ್ಲಿ ನಟಿ ಸೌಂದರ್ಯ ಸಾವನ್ನಪ್ಪಿದರು. ಆ ಸಮಯದಲ್ಲಿ ಅವರಿಗೆ 31 ವರ್ಷ ವಯಸ್ಸಾಗಿತ್ತು ಮತ್ತು ಗರ್ಭಿಣಿ ಎಂದು ವರದಿಯಾಗಿದೆ. ಸುಟ್ಟು ಕರಕಲಾದ ಸ್ಥಿತಿಯಲ್ಲಿ ನಟಿ ಪತ್ತೆಯಾಗಿದ್ದರು.
ಇದೀಗ ನೀಡಿದ ದೂರಿನಲ್ಲಿ ಭೂಕಬಳಿಕೆಯಲ್ಲಿ ಮೋಹನ್ ಬಾಬು ಅವರ ಪಾತ್ರವನ್ನು ತನಿಖೆ ಮಾಡಬೇಕೆಂದು ಕಾರ್ಯಕರ್ತ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ ಮತ್ತು ವಿವಾದಿತ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ತನಗೆ ಬೆದರಿಕೆಗಳಿವೆ ಎಂದು ಆರೋಪಿಸಿ ಅವರು ಪೊಲೀಸ್ ರಕ್ಷಣೆಯನ್ನೂ ಕೋರಿದ್ದಾರೆ.
ದೂರಿನಲ್ಲಿ ಮೋಹನ್ ಬಾಬು ಮತ್ತು ಅವರ ಮಗ ಮಂಚು ಮನೋಜ್ ನಡುವಿನ ಪ್ರತ್ಯೇಕ ಆಸ್ತಿ ವಿವಾದದ ಬಗ್ಗೆಯೂ ಉಲ್ಲೇಖಿಸಲಾಗಿದೆ, ಇದು ಕಳೆದ ವರ್ಷ ಸುದ್ದಿಯಾಗಿತ್ತು.
ಇನ್ನೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ, ಮತ್ತು ಮೋಹನ್ ಬಾಬು ಆರೋಪಗಳಿಗೆ ಪ್ರತಿಕ್ರಿಯಿಸಿಲ್ಲ. ಈ ಬೆಳವಣಿಗೆಯ ಬಗ್ಗೆ ಅಧಿಕಾರಿಗಳು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.