Select Your Language

Notifications

webdunia
webdunia
webdunia
webdunia

ಕಾರ್ತಿಕ್ ಆರ್ಯನ ಜತೆಗಿನ ಶ್ರೀಲೀಲಾ ಡೇಟಿಂಗ್‌ ಬಗ್ಗೆ ಮೌನ ಮುರಿದ ನಟನ ತಾಯಿ

Actor Kartik Aryan

Sampriya

ಬೆಂಗಳೂರು , ಬುಧವಾರ, 12 ಮಾರ್ಚ್ 2025 (14:13 IST)
Photo Courtesy X
ಬೆಂಗಳೂರು: ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಂದು ಬಾಲಿವುಡ್‌ ರಂಗದಲ್ಲಿ ಮಿಂಚುತ್ತಿರುವ ನಟಿ ಶ್ರೀಲೀಲಾ ಅವರು ಬಾಲಿವುಡ್‌ನ ನಟನ ಜತೆ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಈಚೆಗೆ ಹರಿದಾಡಿತ್ತು.  ನಟ ಕಾರ್ತಿಕ್ ಆರ್ಯನ್ ಜತೆ ಕನ್ನಡದ ಬೆಡಗಿ ಶ್ರೀಲೀಲಾ ಲವ್‌ನಲ್ಲಿ ಬಿದ್ದಿದ್ದಾರೆಂಬ ಸುದ್ದಿಯಿತ್ತು. ಆದರೆ ಈ ವಿಚಾರದ ಬಗ್ಗೆ ನಟ ತಾಯಿ ಸ್ಪಷ್ಟನೆ ನೀಡಿದ್ದಾರೆ.

ಕಾರ್ತಿಕ್ ಅವರ ತಾಯಿ ಮಾಲಾ ತಿವಾರಿ ಅವರು 2025 ರ IIFA ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೀಗ ಈ ಕಾರ್ಯಕ್ರಮದ ಒಂದು ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ತಿವಾರಿ ಬಳಿ  ಭಾವಿ ಸೊಸೆ ಹೇಗಿರಬೇಕೆಂದು ನಿರೀಕ್ಷೆಗಳ ಬಗ್ಗೆ ಕೇಳಲಾಗುತ್ತದೆ. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ತಿಕ್ ಅವರ ತಾಯಿ, ನಮ್ಮ ಕುಟುಂಬದ ಬೇಡಿಕೆ, ನಮ್ಮ ಸೊಸೆ ಒಳ್ಳೆಯ ವೈದ್ಯೆಯಾಗಿರಬೇಕೆಂದು ಎಂದು ಹೇಳಿದ್ದಾರೆ.  ಟ್ರೈನಿ ವೈದ್ಯೆಯಾಗಿರುವ ಶ್ರೀಲೀಲಾ ಅವರ ತಾಯಿಯೂ ಕೂಡಾ ಖ್ಯಾತ ವೈದ್ಯೆಯಾಗಿದ್ದಾರೆ.

ಇದೀಗ ಕಾರ್ತಿಕ್ ಆರ್ಯನ್ ಅವರ ತಾಯಿ ಶ್ರೀಲೀಲಾ ಜೊತೆ ತಮ್ಮ ಮಗನ ಡೇಟಿಂಗ್ ವದಂತಿಗಳ ಬಗ್ಗೆ ದೊಡ್ಡ ಸುಳಿವನ್ನು ನೀಡಿದ್ದಾರೆ.  ಕಾರ್ತಿಕ್ ಮತ್ತು ಶ್ರೀಲೀಲಾ ಇಬ್ಬರೂ ತಮ್ಮ ಸಂಬಂಧವನ್ನು ಇಲ್ಲಿಯವರೆಗೆ ದೃಢಪಡಿಸಿಲ್ಲ ಆದರೆ ತಾಯಿಯ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ.

ಕಾರ್ತಿಕ್ ಆರ್ಯನ್ ಅವರ ಸಹೋದರಿ ಡಾ.ಕೃತಿಕಾ ತಿವಾರಿ ಅವರು ವೈದ್ಯಕೀಯ ವೃತ್ತಿಜೀವನದಲ್ಲಿ ಮೈಲಿಗಲ್ಲು ಸಾಧಿಸಿದ್ದಕ್ಕೆ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ನಟಿ ಶ್ರೀಲೀಲಾ ಕೂಡಾ ಭಾಗಿಯಾಗಿದ್ದರು. ಇದು ಸಾಕಷ್ಟು ಊಹಾಪೋಹಗಳನ್ನು ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಕಾರ್ತಿಕ್ ಆರ್ಯನ್ ತಾಯಿಯ ಅವರ ಹೇಳಿಕೆ ಶ್ರೀಲೀಲಾ ನಟನ ಜತೆ ಡೇಟಿಂಗ್‌ನಲ್ಲಿರುವುದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂತಹವರಿಗೆ ಆಸ್ಕರ್ ಅವಾರ್ಡ್ ಕೊಡ್ಬೇಕು: ದರ್ಶನ್ ಅನ್ ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಪೋಸ್ಟ್