Select Your Language

Notifications

webdunia
webdunia
webdunia
webdunia

ಐಟಂ ಸಾಂಗ್‌ಗೆ ಬೋಲ್ಡ್‌ ಆಗಿ ಹೆಜ್ಜೆ ಹಾಕಲಿದ್ದಾರೆ ಸ್ಟಾರ್ ನಟಿ 'ಶ್ರೀಲೀಲಾ'

Sreeleela

Sampriya

ನವದೆಹಲಿ , ಭಾನುವಾರ, 28 ಏಪ್ರಿಲ್ 2024 (16:22 IST)
photo Courtesy Instagram
ನವದೆಹಲಿ: ಕನ್ನಡದ 'ಕಿಸ್'  ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶ್ರೀಲೀಲಾ ಸದ್ಯ ತೆಲುಗು ಚಿತ್ರರಂಗದಲ್ಲಿ ಭಾರೀ ಡಿಮ್ಯಾಂಡ್‌ನಲ್ಲಿದ್ದಾರೆ.

ನಟರಾದ ಮಹೇಶ್‌ ಬಾಬು, ರವಿತೇಜ, ರಾಮ್ ಪೋತಿನೇನಿ, ನಂದಮೂರಿ ಬಾಲಕೃಷ್ಣ, ನಿತಿನ್, ಪವನ್ ಕಲ್ಯಾನ್ ಸೇರಿದಂತೆ ಅನೇಕ ಸ್ಟಾರ್ ನಟರ ಜತೆ ಶ್ರೀಲೀಲಾ ಈಗಾಗಲೇ ತೆರೆ ಹಂಚಿಕೊಂಡು ಜನರ ಮನಸ್ಸನ್ನು ಗೆದ್ದಿದ್ದಾರೆ. ಇವರ ಬಬ್ಲಿ ನಟನೆ, ಕ್ಯೂಟ್‌ ಸ್ಮೈಲ್‌ಗೆ ಸಿನಿ ಪ್ರಿಯರು ಫಿದಾ ಆಗಿದ್ದಾರೆ.  ಇದೀಗ ಸ್ಟಾರ್ ನಟಿಯರಿಗೆ ಸೆಡ್ಡು ಹೊಡೆತು ಮಿಂಚುತ್ತಿರುವ ಶ್ರೀಲೀಲಾ  ಕೆರಿಯರ್ ಉತ್ತುಂಗದಲ್ಲಿರುವಾಗಲೇ ಸಾಹಸ ಮಾಡಲು ಹೊರಟಿದ್ದಾರೆ.

ಈಚೆಗೆ ಮಹೇಶ್ ಬಾಬು ಅಭಿನಯದ ಗುಂಟೂರು ಕಾರಂ ಸಿನಿಮಾದಲ್ಲಿ ನಟಿಸಿದ್ದ ಶ್ರೀಲೀಲಾ ತಮ್ಮ ಡ್ಯಾನ್ಸ್ ಪರ್ಫಾರ್ಮೆನ್ಸ್‌ ಮೂಲಕ ಎಲ್ಲರನ್ನೂ ಹುಚ್ಚೆದ್ದು ಕುಣಿಸುವಂತೆ ಮಾಡಿದ್ದಾರೆ.

ಶ್ರೀಲೀಲಾ ಡ್ಯಾನ್ಸ್‌ಗೆ ಸ್ಟಾರ್ ನಟರೇ ಫಿದಾ ಆಗಿದ್ದು, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಶ್ರೀಲೀಲಾ  ಐಟಂ ಹಾಡಿಗೆ ಸ್ಟೆಪ್ ಹಾಕಲಿದ್ದಾರೆ.  ಕಾಲಿವುಡ್ ಹೀರೋ ವಿಜಯ್ ದಳಪತಿ ಅವರ ಸಿನಿಮಾದಲ್ಲಿ ಐಟಂ ಸಾಂಗ್‌ಗೆ ಶ್ರೀಲೀಲಾ ಅವರು ಹೆಜ್ಜೆಹಾಕಿದ್ದಾರೆ ಎಂಬ ಸುದ್ದಿಯಿದೆ. ಇದೆಷ್ಟರ ಮಟ್ಟಿಗೆ ಸತ್ಯ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಪಾನ್‌ನಲ್ಲಿ ಬಿಡುಗಡೆಗೆ ಸಿದ್ಧವಾದ ಚಾರ್ಲಿ 777: ಕನ್ನಡ ಸಿನಿಮಾಕ್ಕೆ ಮತ್ತೊಂದು ಗರಿ