ಹೈದರಾಬಾದ್: ಕನ್ನಡ ಮೂಲದ ನಟಿ ಶ್ರೀಲೀಲಾಗೆ ತೆಲುಗು ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಕೆನ್ನೆಗೆ ಬಾರಿಸಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ಬಾಲಕೃಷ್ಣ ಜೊತೆ ಎನ್ ಬಿಕೆ108 ಸಿನಿಮಾದಲ್ಲಿ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಬಾಲಕೃಷ್ಣ ಸೊಸೆಯ ಪಾತ್ರ ಮಾಡುತ್ತಿದ್ದಾರೆ. ಆದರೆ ಶೂಟಿಂಗ್ ಸೆಟ್ ನಲ್ಲಿ ಮುತ್ತುಕೊಟ್ಟಿದ್ದಕ್ಕೆ ಸಿಟ್ಟಿಗೆದ್ದ ಬಾಲಯ್ಯ ಶ್ರೀಲೀಲಾ ಕೆನ್ನೆಗೆ ಬಾರಿಸಿದ್ದಾರೆ ಎಂಬ ಸುದ್ದಿಯಿದೆ.
ಬಾಲಕೃಷ್ಣ ಹಲವು ಬಾರಿ ಅಭಿಮಾನಿಗಳಿಗೆ ಕಪಾಳಮೋಕ್ಷ ಮಾಡಿ ಸುದ್ದಿಯಾಗಿದ್ದರು. ಅವರ ಸಿಟ್ಟು ಎಲ್ಲರಿಗೂ ಗೊತ್ತೇ ಇದೆ. ಆದರೆ ಈಗ ನಟಿಯ ಕೆನ್ನೆಗೆ ಬಾರಿಸಿದ ಸುದ್ದಿ ಇದೇ ಮೊದಲ ಬಾರಿಗೆ ಕೇಳಿಬರುತ್ತಿದೆ. ಆದರೆ ಇನ್ನೊಂದು ಮೂಲದ ಪ್ರಕಾರ ಇದು ಸಿನಿಮಾದ ದೃಶ್ಯವೊಂದಕ್ಕೆ ಸಂಬಂಧಿಸಿದ್ದಾಗಿದೆ ಎಂದೂ ಹೇಳಲಾಗುತ್ತಿದೆ. ಅಸಲಿ ಸತ್ಯ ಯಾವುದು ಎನ್ನುವುದು ಗೊತ್ತಾಗಿಲ್ಲ.