ಪಾಟ್ನಾ: ಗಾಯಕ ಯೋ ಯೋ ಹನಿ ಸಿಂಗ್ ಅವರ ಇತ್ತೀಚಿನ ಚಾರ್ಟ್‌ಬಸ್ಟರ್ 'ಮ್ಯಾನಿಯನ್' ಚಿತ್ರದ ಹಾಡು ಅಶ್ಲೀಲತೆಯಿಂದ ಕೂಡಿದೆ ಎಂದು ಆರೋಪಿಸಿ ಖ್ಯಾತ ನಟಿ ನಿತು ಚಂದ್ರ ಅವರು ಪಾಟ್ನಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ತಿಂಗಳ ಕೊನೆಯಲ್ಲಿ ವಿಚಾರಣೆ ನಡೆಯುವ ಸಾದ್ಯತೆಯಿದೆ. ಹನಿ ಸಿಂಗ್ ಜತೆ ಹಾಡಿನಲ್ಲಿ ಸಹಕರಿಸಿದವರ ಹೆಸರುಗಳಿವೆ. ಅದರಲ್ಲಿ ಗೀತರಚನೆಕಾರ ಲಿಯೋ ಗ್ರೆವಾಲ್ ಮತ್ತು ಭೋಜ್‌ಪುರಿ ಗಾಯಕರಾದ ರಾಗಿಣಿ ವಿಶ್ವಕರ್ಮ ಮತ್ತು ಅರ್ಜುನ್ ಅಜನಾಬಿ ಸೇರಿದ್ದಾರೆ.
ಹಲವಾರು ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಭೋಜ್‌ಪುರಿ ಮತ್ತು ಮೈಥಿಲಿ ಚಲನಚಿತ್ರಗಳನ್ನು ನಿರ್ಮಿಸಿರುವ ಪಾಟ್ನಾ ಮೂಲದ ನಟಿ ಇವರಾಗಿದ್ದಾರೆ. "ಸಾಹಿತ್ಯವನ್ನು ತಿದ್ದುಪಡಿ ಮಾಡಲು" ಪ್ರತಿವಾದಿಗಳಿಗೆ ನ್ಯಾಯಾಲಯದಿಂದ ನಿರ್ದೇಶನವನ್ನು ಕೋರಿದ್ದಾರೆ.
ಈ ಹಾಡು "ಬಹಿರಂಗ ಲೈಂಗಿಕತೆಯನ್ನು ಚಿತ್ರಿಸುತ್ತದೆ", "ಮಹಿಳೆಯರನ್ನು ಕೇವಲ ಲೈಂಗಿಕ ವಸ್ತುಗಳಾಗಿ ತೋರಿಸಲಾಗಿದೆ" ಎಂದು ಅವರು ಹೇಳಿದ್ದಾರೆ.