ಪ್ರಣಯ ಪಕ್ಷಿಗಳಂತೆ ಇದ್ದ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಮತ್ತು ನಟ ವಿಜಯ್ ವರ್ಮಾ ಅವರ ಮಧ್ಯೆ ಬ್ರೇಕಪ್ ಆಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದಕ್ಕೆಲ್ಲ ಕಾರಣ ಇನ್‌ಸ್ಟಾಗ್ರಾಮ್‌ನಲ್ಲಿ ಜತೆಗಿದ್ದ ಫೋಟೋವನ್ನು ಡಿಲೀಟ್ ಮಾಡಿರುವುದು. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಬ್ರೇಕಪ್ ಆದರೂ ಸ್ನೇಹಿತರಾಗಿ ಉಳಿಯಲು ಯೋಜಿಸಿದ್ದಾರೆ ಎನ್ನಲಾಗಿದೆ.
ತಮನ್ನಾ ಮತ್ತು ವಿಜಯ್ 2022 ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು. 2023 ರಿಂದ, ಅವರ ಚಲನಚಿತ್ರ ಲಸ್ಟ್ ಸ್ಟೋರೀಸ್ ಬಿಡುಗಡೆಯಾದಾಗ, 2024 ರವರೆಗೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರನ್ನು ಒಟ್ಟಿಗೆ ಸೆರೆಹಿಡಿಯಲಾಯಿತು.
ಸಿನಿಮಾ ಇವೆಂಟ್‌ಗಳಲ್ಲಿ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಾಗ ಈ ಜೋಡಿ ಶೀಘ್ರದಲ್ಲೇ ಹಸೆಮಣೆ ಏರುತ್ತೆ ಎಂದು ಹೇಳಲಾಗಿತ್ತು. ಆದರೆ ಇದೀಗ ಬ್ರೇಕಪ್ ಸುದ್ದಿ ಅವರ ಅಭಿಮಾನಿಗಳಿಗೆ ಶಾಕ್ ನೀಡಿದರು. ಇಬ್ಬರು ಸ್ಟಾರ್‌ಗಳು ತಮ್ಮ ವೃತ್ತಿ ಜೀವನದ ಕಡೆ ಕೇಂದ್ರಿಕರಿಸಿದ್ದಾರೆ ಎನ್ನಲಾಗಿದೆ.