Select Your Language

Notifications

webdunia
webdunia
webdunia
webdunia

ಸುಮಲತಾ ಅಂಬರೀಶ್ ಅನ್ ಫಾಲೋ ಮಾಡಿದ ದರ್ಶನ್: ಅಮ್ಮನ ಜೊತೆ ಮಗನಿಗೆ ಮುನಿಸಾ

Sumalatha Ambareesh-Darshan

Krishnaveni K

ಬೆಂಗಳೂರು , ಬುಧವಾರ, 12 ಮಾರ್ಚ್ 2025 (09:13 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಆರೋಪಿ, ನಟ ದರ್ಶನ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸುಮಲತಾ ಅಂಬರೀಶ್ ರನ್ನು ಅನ್ ಫಾಲೋ ಮಾಡಿದ್ದು ಇಬ್ಬರ ನಡುವೆ ಬಿರುಕು ಮೂಡಿದೆಯಾ ಎಂಬ ಅನುಮಾನ ಮೂಡಿದೆ.

ನಟ ದರ್ಶನ್ ಜೈಲಿನಿಂದ ಬಿಡುಗಡೆಯಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಒಂದೆರಡು ಬಾರಿ ಪೋಸ್ಟ್ ಮಾಡಿದ್ದಾರೆ. ಅದೂ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ. ಇದೀಗ ಡೆವಿಲ್ ಶೂಟಿಂಗ್ ಗೆ ಮರಳುತ್ತಿದ್ದು, ನಾರ್ಮಲ್ ಜೀವನಕ್ಕೆ ಮರಳುವ ಮುನ್ನ ಹಲವರನ್ನು ಸೋಷಿಯಲ್ ಮೀಡಿಯಾದಿಂದ ಅನ್ ಫಾಲೋ ಮಾಡಿ ಶಾಕ್ ಕೊಟ್ಟಿದ್ದಾರೆ.

ಈ ಹಿಂದೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿದ್ದಾಗ ಸುಮಲತಾ ಒಮ್ಮೆಯೂ ನೋಡಲು ಜೈಲಿಗೆ ಬರಲಿಲ್ಲ. ಇದನ್ನು ದರ್ಶನ್ ಅಭಿಮಾನಿಗಳು ಪ್ರಶ್ನಿಸಿದ್ದರು. ಕೊನೆಗೆ ನಾನು ನೇರವಾಗಿ ಭೇಟಿ ಮಾಡದೇ ಇದ್ದರೂ ದರ್ಶನ್ ಕುಟುಂಬದೊಂದಿಗೆ ಟಚ್ ನಲ್ಲಿದ್ದೆ. ಅವನು ಯಾವತ್ತಿದ್ದರೂ ನನ್ನ ಮಗ ಎಂದು ಹೇಳಿಕೆ ನೀಡಿದ್ದರು.

ಆದರೆ ಈಗ ಏಕಾಏಕಿ ಸುಮಲತಾ ಖಾತೆ ಅನ್ ಫಾಲೋ ಮಾಡಿರುವುದು ನೋಡಿದರೆ ಮೇಲ್ನೋಟಕ್ಕೆ ಹೇಳಿದಂತೆ ಎಲ್ಲವೂ ಸರಿಯಿಲ್ಲವೆನಿಸುತ್ತಿದೆ. ಕಷ್ಟದ ಸಮಯದಲ್ಲಿ ನೋಡಲೂ ಬಾರದ ಸುಮಲತಾ ಮೇಲೆ ದರ್ಶನ್ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ದರ್ಶನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಕೆಲವೇ ಮಂದಿಯನ್ನು ಫಾಲೋ ಮಾಡುತ್ತಿದ್ದರು. ಇದೀಗ ಒಟ್ಟು ಆರು ಮಂದಿಯನ್ನು ಅನ್ ಫಾಲೋ ಮಾಡಿದ್ದು ಅವರು ಯಾರನ್ನೂ ಫಾಲೋ ಮಾಡುತ್ತಿಲ್ಲ ಎಂದು ತೋರಿಸುತ್ತಿದೆ. ಸುಮಲತಾ, ಅಭಿಷೇಕ್ ಅಂಬರೀಶ್, ಅವಿವಾ ಬಿಡಪ್ಪ, ದರ್ಶನ್ ಫ್ಯಾನ್ ಪೇಜ್ ಮತ್ತು ಪುತ್ರ ವಿನೇಶ್ ಖಾತೆಯನ್ನು ಅನ್ ಫಾಲೋ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆಯ ಸ್ಮಾರಕ ನಿರ್ಮಾಣಕ್ಕೆ ಅಯೋದ್ಯೆಯಲ್ಲಿ ಭೂ ಖರೀದಿಸಿದ ಬಿಗ್‌ಬಿ