ಮೈಸೂರು: ನಾಳೆಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಶೂಟಿಂಗ್ ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಕೊಲೆ ಆರೋಪಿ ದರ್ಶನ್ ಶೂಟಿಂಗ್ ಗೆ ಪೊಲೀಸರಿಂದ ಟೈಟ್ ಸೆಕ್ಯೂರಿಟಿ ಇರಲಿದೆ.
ನಾಳೆ ಮೈಸೂರಿನ ಲಲಿತ್ ಮಹಲ್ ನಲ್ಲಿ ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್ ಆರಂಭಿಸಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಅರೆಸ್ಟ್ ಆಗುವ ಮುನ್ನ ಕೆಲವು ಭಾಗದ ಚಿತ್ರೀಕರಣ ನಡೆದಿತ್ತು. ಇದೀಗ ಮುಂದುವರಿದ ಭಾಗದ ಚಿತ್ರೀಕರಣ ಆರಂಭಿಸಲಿದ್ದಾರೆ.
ನಾಳೆ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಶೂಟಿಂಗ್ ಆರಂಭವಾಗಲಿದೆ. ಇದಕ್ಕಾಗಿ ಪೊಲೀಸರು ಬಿಗಿ ಭದ್ರತೆ ಒದಗಿಸಲಿದ್ದಾರೆ. ಚಿತ್ರೀಕರಣ ಸ್ಥಳಕ್ಕೆ ಅಭಿಮಾನಿಗಳ ಭೇಟಿಗೆ ಅವಕಾಶವಿಲ್ಲ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್ ಶೂಟಿಂಗ್ ನಲ್ಲಿ ಭಾಗಿಯಾಗಲು ಮೈಸೂರಿಗೆ ಭೇಟಿ ನೀಡಲು ಒಪ್ಪಿಗೆ ಪಡೆದಿದ್ದರು. ಬೆನ್ನು ನೋವಿನ ಕಾರಣಕ್ಕೆ ಬಿಡುಗಡೆ ಬಳಿಕ ಕೆಲವು ದಿನ ಬ್ರೇಕ್ ಪಡೆದಿದ್ದ ದರ್ಶನ್ ಈಗ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.