Select Your Language

Notifications

webdunia
webdunia
webdunia
webdunia

ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿಗೆ ತಮಿಳಿನಲ್ಲಿ ಬಿಗ್ ಆಫರ್: ಕನ್ನಡಕ್ಕೆ ಕೈಕೊಟ್ರಾ ಎಂದ ಫ್ಯಾನ್ಸ್

Megha Shetty

Krishnaveni K

ಬೆಂಗಳೂರು , ಮಂಗಳವಾರ, 11 ಮಾರ್ಚ್ 2025 (09:57 IST)
Photo Credit: X
ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ಮೂಲಕ ಮನೆ ಮಾತಾಗಿದ್ದ ನಟಿ ಮೇಘಾ ಶೆಟ್ಟಿ ಈಗ ತಮಿಳು ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ. ಅವರ ಹೊಸ ಸಿನಿಮಾದ ಮುಹೂರ್ತ ನಿನ್ನೆ ನೆರವೇರಿದೆ.

ಮೇಘಾ ಶೆಟ್ಟಿ ಕಿರುತೆರೆ ಮೂಲಕ ಬಣ್ಣದ ಲೋಕ ಪ್ರವೇಶಿಸಿ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್, ಡಾರ್ಲಿಂಗ್ ಕೃಷ್ಣ ಜೊತೆ ದಿಲ್ ಪಸಂದ್, ಧನ್ವೀರ್ ಜೊತೆ ಕೈವ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಪ್ರಜ್ವಲ್ ದೇವರಾಜ್ ಜೊತೆ ಚೀತಾ, ಕವೀಶ್ ಶೆಟ್ಟಿ ಜೊತೆ ಆಪರೇಷನ್ ಲಂಡನ್ ಕೆಫೆ ಸಿನಿಮಾ ಮಾಡುತ್ತಿದ್ದಾರೆ.

ಇದರ ನಡುವೆ ಅವರು ತಮಿಳು ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ. ತಮಿಳಿನಲ್ಲಿ ಖ್ಯಾತ ನಟ, ನಿರ್ದೇಶಕ ಶಶಿಕುಮಾರ್ ಸಿನಿಮಾದಲ್ಲಿ ಮೇಘಾ ಅಭಿನಯಿಸಲಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಸಿನಿಮಾದ ಟೈಟಲ್ ಇನ್ನೂ ಅನೌನ್ಸ್ ಆಗಿಲ್ಲ. ಇನ್ನು, ಇದಕ್ಕೂ ಕೆಲವರು ತಗಾದೆ ತೆಗೆದಿದ್ದು ಕನ್ನಡದಲ್ಲಿ ಅವಕಾಶಗಳಿರುವಾಗ ತಮಿಳಿಗೆ ಯಾಕೆ ಎಂದು ಪ್ರಶ್ನೆ ಮಾಡಿದ್ದರು. ಆದರೆ ಹಲವರು ತಮಿಳು ಸಿನಿಮಾಗೆ ವೆಲ್ ಕಂ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಸ್ಟಡಿಯಲ್ಲಿ ಬೆದರಿಕೆ ಹಾಕಿ, ಮಾನಸಿಕ ಹಿಂಸೆ ನೀಡಿದ್ರು: ಜಡ್ಜ್‌ ಎದುರು ಕಣ್ಣೀರು ಹಾಕಿದ ರನ್ಯಾ ರಾವ್‌