ಮುಂಬೈ: ಫೋರ್ಬ್ಸ್ 30/50 ಜಾಗತಿಕ ಶೃಂಗಸಭೆಯಲ್ಲಿ ದೀಪಿಕಾ ಪಡುಕೋಣೆ ತಾಯ್ತನ, ಮಾನಸಿಕ ಆರೋಗ್ಯ ಮತ್ತು ವೃತ್ತಿಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಬಾಲಿವುಡ್ ನಟಿ ದೀಪಿಕಾ ಅವರು ತಾಯ್ತಾನದ ಬಗ್ಗೆ ಮಾತನಾಡಿ ಇದೀಗ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಗಳು ದುವಾ ಬಗ್ಗೆ ಅವರ ದೊಡ್ಡ ಕಾಳಜಿ ಮತ್ತು ಆಂತರಿಕ ಶಾಂತಿಯನ್ನು ಕಂಡುಕೊಳ್ಳುವ ಗುರಿ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ.
ದೀಪಿಕಾ ಪಡುಕೋಣೆ ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದ ಫೋರ್ಬ್ಸ್ 30/50 ಜಾಗತಿಕ ಶೃಂಗಸಭೆಯಲ್ಲಿ ಪ್ರೇಕ್ಷಕರನ್ನು ಆಕರ್ಷಿಸಿದರು, ಅಲ್ಲಿ ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಪ್ರಯಾಣದ ಬಗ್ಗೆ ಒಳನೋಟಗಳನ್ನು ಹಂಚಿಕೊಂಡರು.
ತಮ್ಮ ವೈಯಕ್ತಿಕ ಗುರಿಯ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತಾ, ದೀಪಿಕಾ ಆಂತರಿಕ ಶಾಂತಿಯ ಮಹತ್ವವನ್ನು ಒತ್ತಿ ಹೇಳಿದರು. ಬದುಕಿನಲ್ಲಿ ಮಾನಸಿಕ ಶಾಂತಿ ತುಂಬಾನೇ ಪ್ರಾಮುಖ್ಯ.