ಬೆಂಗಳೂರು: ಮಗಳು ದುವಾ ಬಂದ ನಂತರ ಮೊದಲ ಬಾರಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೀಪಿಕಾ ಪಡುಕೋಣೆ ಶುಕ್ರವಾರ ಬೆಂಗಳೂರಿನಲ್ಲಿ ಗಾಯಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಚೇರಿಯಲ್ಲಿ ಎಂಜಾಯ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ದಿಲ್ಜಿತ್ ತಂಡದ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ಗಾಯಕ ಲೈವ್ ಆಗಿ ಪ್ರದರ್ಶನ ನೀಡುತ್ತಿರುವುದನ್ನು ಕಾಣಬಹುದು. ಹಾಗೂ ದೀಪಿಕಾ ಪಡುಕೋಣೆ ದಿಲ್ಜಿತ್ ಹಾಡಿಗೆ ೆಂಜಾಯ್ ಮಾಡುತ್ತಿರುವುದನ್ನು ಕಾಣಬಹುದು. ಬಿಳಿ ಸ್ವೆಟ್‌ಶರ್ಟ್ ಮತ್ತು ಜೀನ್ಸ್ ಧರಿಸಿದ್ದ ದೀಪಿಕಾ ತುಂಬಾ ಸಂತೋಷದಿಂದ ಕಾಣುತ್ತಿದ್ದರು.
ವಿಶೇಷ ಏನೆಂದರೆ ಮಗುವಾದ ನಂತರ ದೀಪಿಕಾ ಅವರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡರು.
ದೀಪಾವಳಿಯಂದು, ದೀಪಿಕಾ ಮತ್ತು ರಣವೀರ್ ತಮ್ಮ ಮಗಳನ್ನು ಜಗತ್ತಿಗೆ ಪರಿಚಯಿಸಿದರು, ಅರ್ಥಪೂರ್ಣ ಸಂದೇಶದೊಂದಿಗೆ 'ದುವಾ ಪಡುಕೋಣೆ ಸಿಂಗ್' ಎಂಬ ಹೆಸರನ್ನು ಬಹಿರಂಗಪಡಿಸಿದರು.
"ದುವಾ: ಪ್ರಾರ್ಥನೆ ಅರ್ಥ. ಏಕೆಂದರೆ ಅವಳು ನಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿದ್ದಾಳೆ. ನಮ್ಮ ಹೃದಯಗಳು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ." ಎಂದು ಮಗಳ ಹೆಸರಿನ ಬಗ್ಗೆ ಪೋಸ್ಟ್ ಹಾಕಿದ್ದರು.
ಪ್ರೀತಿಸಿದ್ದ ಈ ಜೋಡಿ 2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಮಗು ದುವಾಳನ್ನು ಸ್ವಾಗತಿಸಿದರು. 8, 2