ಮುಂಬೈ: ಬಾಲಿವುಡ್ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮನೆಗೆ ಪುಟ್ಟ ಗೌರಿಯ ಆಗಮನವಾಗಿದೆ. ಗಣೇಶ ಹಬ್ಬದ ಮರುದಿನವೇ ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಪತಿ ರಣವೀರ್ ಸಿಂಗ್ ಜತೆ ದೀಪಿಕಾ ಶನಿವಾರ ಕುಟುಂಬ ಸಮೇತ ಮುಂಬೈನಲ್ಲಿ ಸಿದ್ದಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದಿದ್ದರು. ಈ ವೇಳೆ ಹಸಿರು ಬಣ್ಣದ ಸಿಲ್ಕ್ ಸಾರಿಯಲ್ಲಿ ದೀಪಿಕಾ ಮುದ್ದಾಗಿ ಕಾಣಿಸಿಕೊಂಡಿದ್ದರು. ಇಂದು ಬೆಳಗ್ಗೆ ದೀಪಿಕಾ ತಮ್ಮ ಕುಟುಂಬದೊಂದಿಗೆ ಆಸ್ಪತ್ರೆಗೆ ಹೋಗಿದ್ದರು.
ನಟಿ ದೀಪಿಕಾ ಪಡುಕೋಣೆ 2018 ರಲ್ಲಿ ಇಟಲಿಯ ಲೇಕ್ ಕೊಮೊದಲ್ಲಿ ನಡೆದ ಸುಂದರವಾದ ಸಮಾರಂಭದಲ್ಲಿ ರಣವೀರ್ ಸಿಂಗ್ ಅವರನ್ನು ಕೈ ಹಿಡಿದರು.
ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ, ಬಾಲಿವುಡ್‌ನ ಸ್ಟಾರ್ ದಂಪತಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಇನ್ನೂ ಹೆರಿಗೆಗೂ ಮುನ್ನಾ ವಿಘ್ನ ವಿನಾಶಕ ಮೊರೆ ಹೋಗಿರುವ ದೀಪಿಕಾ ರಣವೀರ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.