Select Your Language

Notifications

webdunia
webdunia
webdunia
webdunia

ಪತ್ನಿ ದೀಪಿಕಾ ಅಭಿನಯಕ್ಕೆ ಫುಲ್‌ ಮಾರ್ಕ್ಸ್‌ ನೀಡಿ ಏನಂದ್ರೂ ನೋಡಿ ರಣವೀರ್‌

ಪತ್ನಿ ದೀಪಿಕಾ ಅಭಿನಯಕ್ಕೆ ಫುಲ್‌ ಮಾರ್ಕ್ಸ್‌ ನೀಡಿ ಏನಂದ್ರೂ ನೋಡಿ ರಣವೀರ್‌

Sampriya

ಮುಂಬೈ , ಬುಧವಾರ, 3 ಜುಲೈ 2024 (18:43 IST)
Photo Courtesy X
ಮುಂಬೈ: ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಅಭಿನಯದ ಕಲ್ಕಿ 2898ಎಡಿ ಸಿನಿಮಾ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಪತ್ನಿ ದೀಪಿಕಾ ಪಡುಕೋಣೆ ಅಭಿನಯಕ್ಕೆ ಫುಲ್ ಮಾರ್ಕ್ಸ್ ನೀಡಿ, ಅವರ ಅಭಿನಯವನ್ನು ಕೊಂಡಾಡಿದ್ದಾರೆ. ಅದಲ್ಲದೆ ಚಿತ್ರತಂಡವನ್ನು ಶ್ಲಾಘಿಸಿ ಪೋಸ್ಟ್ ಮಾಡಿದ್ದಾರೆ.

ಬುಧವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರಣವೀರ್ ತಮ್ಮ ಪತ್ನಿ ದೀಪಿಕಾ ಪಡುಕೋಣೆ ಸೇರಿದಂತೆ ಇಡೀ ತಂಡವನ್ನು ಶ್ಲಾಘಿಸಿ ಚಿತ್ರದ ವಿಮರ್ಶೆಯನ್ನು ಪೋಸ್ಟ್ ಮಾಡಿದ್ದಾರೆ.

ಇನ್ನೂ ಪತ್ನಿ ದೀಪಿಕಾ ಅಭಿನಯವನ್ನು ಕೊಂಡಾಡಿದ ರಣವೀರ್ ಅವರು, ಮೈ ಬೇಬಿ ದೀಪಿಕಾ ಪಡುಕೋಣೆ.  ಪ್ರತಿಕ್ಷಣವನ್ನು ನಿನ್ನಾ ಗ್ರೇಸ್ ಮತ್ತು ಘನತೆಯಿಂದ  ಮೇಲಕ್ಕೆತ್ತಿದ್ದೀಯಾ. ಅಂತಹ ಕಟುವಾದ, ಅಂತಹ ಕವಿತೆ, ಅಂತಹ ಶಕ್ತಿ ನೀನು. ನೀನು ನಿಲುಕೆಗೂ ಸಿಗಳಾದವಳು. ಐ ಲವ್‌ ಯೂ ಎಂದು ರೋಮ್ಯಾಂಟಿಕ್ ಆಗಿ ಪತ್ನಿಯನ್ನು ಬಣ್ಣಿಸಿದ್ದಾರೆ.

"ಕಲ್ಕಿ 2898 ಎಡಿ ಒಂದು ಭವ್ಯವಾದ ಸಿನಿಮೀಯ ಚಮತ್ಕಾರ! ಅದುವೇ ದೊಡ್ಡ ಪರದೆಯ ಸಿನಿಮಾ! ತಾಂತ್ರಿಕ ನಿರ್ವಹಣೆಯಲ್ಲಿ ಅಭೂತಪೂರ್ವ ಮಟ್ಟದ ಕೈಚಳಕ. ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ" ಎಂದು ರಣವೀರ್ ತಮ್ಮ ವಿಮರ್ಶೆಯನ್ನು ಪ್ರಾರಂಭಿಸಿದರು.

ನಿರ್ದೇಶಕ ನಾಗ್ ಅಶ್ವಿನ್ ಅವರನ್ನು ಅಭಿನಂದಿಸಿದ ಅವರು, "ನಾಗಿ ಸರ್ ಮತ್ತು ತಂಡಕ್ಕೆ ಅಭಿನಂದನೆಗಳು! ಪ್ರಭಾಸ್ ಮತ್ತು ಕಮಲ್ ಹಾಸನ್ ಅವರನ್ನು ಶ್ಲಾಘಿಸಿದರು, "ರೆಬೆಲ್ ಸ್ಟಾರ್ ರಾಕ್ಸ್! ಪ್ರಭಾಸ್‌ ಎಂದೆಂದಿಗೂ ಸರ್ವೋಚ್ಚ!

ಚಿತ್ರದಲ್ಲಿ ಅಶ್ವತ್ಥಾಮ ಪಾತ್ರದಲ್ಲಿ ನಟಿಸಿರುವ ಅಮಿತಾಬ್ ಬಚ್ಚನ್ ಬಗ್ಗೆ ಬರೆದು, ನೀವು ನನ್ನಂತ್ತೆ ಅಮಿತಾಬ್ ಬಚ್ಚನ್ ಅವರ ಅಭಿಮಾನಿಯಾಗಿದ್ದರೆ, ಖಂಡಿತವಾಗಲೂ ಈ ಸಿನಿಮಾವನ್ನು ನೋಡಲು ಮಿಸ್ ಮಾಡ್ಬೇಡಿ ಎಂದು ಬರೆದುಕೊಂಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಕಲ್ಕಿಯಲ್ಲಿ ಅಶ್ವತ್ಥಾಮನಾಗಿ ಬಿಗ್‌ಬಿ, ಈ ವಯಸ್ಸಲ್ಲೂ ಅಂದೆಂತಹ ಉತ್ಸಾಹ