Select Your Language

Notifications

webdunia
webdunia
webdunia
webdunia

ಕುಟುಂಬದ ಜತೆ ಜಾಲಿ ಮಾಡುತ್ತಿರುವ ತಾಯಿಯಾಗಲಿರುವ ದೀಪಿಕಾ ಪಡುಕೋಣೆ

ಕುಟುಂಬದ ಜತೆ ಜಾಲಿ ಮಾಡುತ್ತಿರುವ ತಾಯಿಯಾಗಲಿರುವ ದೀಪಿಕಾ ಪಡುಕೋಣೆ

sampriya

ಮುಂಬೈ , ಶನಿವಾರ, 1 ಜೂನ್ 2024 (19:04 IST)
Photo By X
ಮುಂಬೈ: ಸೆಪ್ಟೆಂಬರ್‌ ತಿಂಗಳಿನಲ್ಲಿ ಮಗುವಿನ ಆಗಮನದ ಖುಷಿಯಲ್ಲಿರುವ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಕುಟುಂಬದ ಜತೆ ಊಟಕ್ಕೆ ರೆಸ್ಟೋರೆಂಟ್‌ಗೆ ತೆರಳಿದರು.  ಔತಣಕೂಟದಲ್ಲಿ ದೀಪಿಕಾ ಪಡುಕೋಣೆ ಅವರು ಸ್ಟೈಲಿಶ್ ಕಪ್ಪು ಉಡುಪಿನಲ್ಲಿ ಪ್ರಕಾಶಮಾನವಾಗಿ ಕಾಣಿಸಿಕೊಂಡರು.

ಫೋಟೋದಲ್ಲಿ ನಟಿ ತಮ್ಮ ಕುಟುಂಬದ ಜತೆ  ರೆಸ್ಟೋರೆಂಟ್‌ನಿಂದ ನಿರ್ಗಮಿಸುತ್ತಿರುವುದನ್ನು ಕಾಣಬಹುದು. ದೀಪಿಕಾ ಕಪ್ಪು ಬಟ್ಟೆಯನ್ನು ಧರಿಸಲು ಆಯ್ಕೆ ಮಾಡಿಕೊಂಡರು ಮತ್ತು ಡೆನಿಮ್ ಜಾಕೆಟ್‌ನೊಂದಿಗೆ ತನ್ನ ಫ್ಯಾಷನ್ ಆಟಕ್ಕೆ ಒತ್ತು ನೀಡಿದರು. ಇನ್ನೂ ಫೋಟೋದಲ್ಲಿ ಬೇಬಿ ಬಂಪ್‌ನ್ನು ಕಾಣಬಹುದು.

ಫೆಬ್ರವರಿ 29 ರಂದು, ದೀಪಿಕಾ ಮತ್ತು ಅವರ ಪತಿ ರಣವೀರ್ ಸಿಂಗ್ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಘೋಷಿಸಿದರು. ಸೆಪ್ಟೆಂಬರ್‌ನಲ್ಲಿ ಮಗು ಜನಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಆರು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ರಣವೀರ್-ದೀಪಿಕಾ ನವೆಂಬರ್ 14, 2018 ರಂದು ಇಟಲಿಯ ಲೇಕ್ ಕೊಮೊದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸಂಜಯ್ ಲೀಲಾ ಬನ್ಸಾಲಿಯವರ ರೊಮ್ಯಾಂಟಿಕ್ ಡ್ರಾಮಾ ಚಿತ್ರ 'ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ' ಸೆಟ್‌ನಲ್ಲಿ ಅವರು ಮೊದಲು ಭೇಟಿಯಾದರು ಮತ್ತು ನಂತರ 'ಬಾಜಿರಾವ್ ಮಸ್ತಾನಿ' ಮತ್ತು 'ಪದ್ಮಾವತ್' ನಲ್ಲಿ  ಒಟ್ಟಾಗಿ ನಟಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಂದೇಶ್‌ ಪ್ರೊಡಕ್ಷನ್ಸ್‌ ಜತೆ ಶೀಘ್ರದಲ್ಲೇ ಸೆಟ್ಟೇರಲಿದೆ ಕಿಚ್ಚನ ಬಿಗ್‌ ಬಜೆಟ್‌ ಸಿನಿಮಾ