Publish Date: Thu, 30 May 2024 (10:30 IST)
Updated Date: Thu, 30 May 2024 (10:34 IST)
Photo Credit: X
ಮುಂಬೈ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸಿ ಚಾಂಪಿಯನ್ ಆಗಿದ್ದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಅವರಿಗೆ ತುಳುನಾಡಿಗಿರುವ ನಂಟಿನ ಬಗ್ಗೆ ತಿಳಿದುಕೊಳ್ಳೋಣ.
ಶ್ರೇಯಸ್ ಅಯ್ಯರ್ ಮುಂಬೈ ನಿವಾಸಿ. ಅವರು ಹುಟ್ಟಿ ಬೆಳೆದಿದ್ದೆಲ್ಲಾ ಮುಂಬೈನಲ್ಲೇ. ಅಲ್ಲಿಯೇ ವಿದ್ಯಾಭ್ಯಾಸ ಮಾಡಿದವರು. ಮುಂಬೈ ಪರ ದೇಶೀಯ ಕ್ರಿಕೆಟ್ ಆಡಿ ಪ್ರವರ್ಧಮಾನಕ್ಕೆ ಬಂದವರು. ಇದೀಗ ತಮ್ಮ ಪರಿವಾರದೊಂದಿಗೆ ಮುಂಬೈನಲ್ಲೇ ನೆಲೆಸಿದ್ದಾರೆ.
ಆದರೆ ಅವರ ತಾಯಿ ರೋಹಿಣಿ ಶೆಟ್ಟಿ ಮೂಲತಃ ಮಂಗಳೂರಿನವರು. ತುಳುನಾಡಿನವರಾದ ಅವರು ಅಪ್ಪಟ ತುಳುವರ ಹೆಣ್ಣುಮಗಳು. ಹೀಗಾಗಿ ಕೆಎಲ್ ರಾಹುಲ್ ರಂತೇ ಶ್ರೇಯಸ್ ಅಯ್ಯರ್ ಗೂ ಮಂಗಳೂರಿನ ಕನೆಕ್ಷನ್ ಇದೆ.
ಶ್ರೇಯಸ್ ಅಯ್ಯರ್ ಫೇವರಿಟ್ ತಿಂಡಿಗಳಲ್ಲಿ ನೀರು ದೋಸೆ ಕೂಡಾ ಒಂದು. ಹಿಂದೊಮ್ಮೆ ವಿರಾಟ್ ಕೊಹ್ಲಿ ದಂಪತಿಗೂ ನೀರು ದೋಸೆಯ ರುಚಿ ಹತ್ತಿಸಿದ್ದರು. ಅವರ ತಂದೆ ತಮಿಳುನಾಡಿನವರು. ಹಾಗಿದ್ದರೂ ಶ್ರೇಯಸ್ ಹುಟ್ಟಿಬೆಳೆದಿದ್ದೆಲ್ಲಾ ಮುಂಬೈನಲ್ಲಿ ಆಗಿರುವುದರಿಂದ ಅವರು ಮುಂಬೈಕರ್ ಆಗಿಯೇ ಇದ್ದಾರೆ.