Select Your Language

Notifications

webdunia
webdunia
webdunia
webdunia

ಗೌತಮ್ ಗಂಭೀರ್ ಕೋಚ್ ಆಗುತ್ತಿದ್ದಂತೇ ಕೊಹ್ಲಿ, ರೋಹಿತ್ ಶರ್ಮಾಗೆ ಕೊಕ್

Virat Kohli

Krishnaveni K

ಮುಂಬೈ , ಗುರುವಾರ, 30 ಮೇ 2024 (08:40 IST)
ಮುಂಬೈ: ಟೀಂ ಇಂಡಿಯಾಗೆ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಐಪಿಎಲ್ ನ ಯಶಸ್ವೀ ಕೋಚ್ ಇನ್ನು ರಾಷ್ಟ್ರೀಯ ತಂಡದ ಪರ ಸೇವೆ ಸಲ್ಲಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಇದರ ಬೆನ್ನಲ್ಲೇ ಗಂಭೀರ್ ತಂಡಕ್ಕೆ ಬಂದರೆ ಟೀಂ ಇಂಡಿಯಾದಲ್ಲಿ ಏನೆಲ್ಲಾ ಬದಲಾವಣೆಗಳಾಗಬಹುದು ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಗೌತಮ್ ಗಂಭೀರ್ ಗೆ ಟೀಂ ಇಂಡಿಯಾಗೆ ಯುವ ಆಟಗಾರರನ್ನಿಟ್ಟುಕೊಂಡು ಹೊಸ ತಂಡ ಕಟ್ಟ ಹೊಣೆ ಹೆಗಲಿಗೇರುವ ಸಾಧ್ಯತೆಯಿದೆ.

ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಈಗಲೂ ಕೊಹ್ಲಿ, ರೋಹಿತ್ ರಂತಹ ಹಿರಿಯ ಆಟಗಾರರನ್ನೇ ಅವಲಂಬಿಸಲಾಗಿದೆ. ಹೀಗಾಗಿ ಯುವ ಆಟಗಾರರನ್ನೊಳಗೊಂಡ ಹೊಸ ತಂಡವನ್ನು ಕಟ್ಟುವ ಹೊಣೆ ಗಂಭೀರ್ ಗೆ ಸಿಗಬಹುದು.

ಆಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹಿರಿಯ ಆಟಗಾರರಿಗೆ ತಂಡದಿಂದ ಕೊಕ್ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಈಗಾಗಲೇ ತಮ್ಮ ವೃತ್ತಿ ಜೀವನದ ಅಂತಿಮ ಘಟ್ಟದಲ್ಲಿದ್ದಾರೆ. ಹೀಗಾಗಿ ಇದೇ ವರ್ಷ ಅವರ ವೃತ್ತಿ ಜೀವನ ಕೊನೆಯಾದರೂ ಅಚ್ಚರಿಯಿಲ್ಲ. ಆದರೆ ಅದಕ್ಕೆ ಮೊದಲು ಅವರ ಸ್ಥಾನವನ್ನು ತುಂಬಿಸಬಲ್ಲ ಆಟಗಾರರನ್ನು ಗಂಭೀರ್ ತಂಡಕ್ಕೆ ಕೊಡುಗೆಯಾಗಿ ನೀಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಟೀಕಿಸಿದ್ದಕ್ಕೆ ಅಂಬಟಿ ರಾಯುಡು ಮಕ್ಕಳಿಗೆ ಬೆದರಿಕೆ