Select Your Language

Notifications

webdunia
webdunia
webdunia
webdunia

ಫೋಟೋ ತೆಗೆಯಲು ಬಂದ ಅಭಿಮಾನಿಗಳ ಬೈದು ಅಟ್ಟಿದ ಪಾಕಿಸ್ತಾನ ನಾಯಕ ಬಾಬರ್ ಅಜಮ್

Babar Azam

Krishnaveni K

ಕಾರ್ಡಿಫ್ , ಬುಧವಾರ, 29 ಮೇ 2024 (14:57 IST)
ಕಾರ್ಡಿಫ್: ಪಾಕಿಸ್ತಾನ ನಾಯಕ ಬಾಬರ್ ಅಜಮ್ ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಆದರೆ ಇದೀಗ ಅಭಿಮಾನಿಗಳೊಂದಿಗೆ ಅವರ ದುರ್ವರ್ತನೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿ ವೇಳೆ ಬಾಬರ್ ಅಜಮ್ ಕಾರ್ಡಿಫ್ ನಗರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಕಾರು ಹತ್ತಲು ಬಂದಾಗ ಅವರನ್ನು ಅಲ್ಲಿದ್ದ ಅಭಿಮಾನಿಗಳು ಗುರುತಿಸಿ ಫೋಟೋ ತೆಗೆಯಲು, ಆಟೋಗ್ರಾಫ್ ಪಡೆಯಲು ಮುಂದಾಗಿದ್ದಾರೆ.

ತಮ್ಮನ್ನು ಅಭಿಮಾನಿಗಳ ದಂಡೇ ಹಿಂಬಾಲಿಸಿ ಬಂದಿದ್ದರಿಂದ ಕೋಪಗೊಂಡ ಬಾಬರ್ ಸ್ವಲ್ಪ ಹೊತ್ತು ನನ್ನ ಬಿಡಿ ಎಂದು ಕೋಪದಿಂದ ನಿಂದಿಸಿದ್ದಾರೆ. ಬಳಿಕ ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿಗಳಿಗೆ ಎಲ್ಲರನ್ನೂ ದೂರ ಕಳುಹಿಸುವಂತೆ ಹೇಳಿದ್ದಾರೆ.

ಇದರಿಂದ ಅಭಿಮಾನಿಗಳು ನಿರಾಸೆಯಿಂದ ದೂರ ಸರಿದಿದ್ದಾರೆ. ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸ್ಟಾರ್ ಕ್ರಿಕೆಟಿಗ ಎಂದು ಫೋಟೋ ತೆಗೆಯಲು ಬಂದರೆ ಇಷ್ಟು ದುರಹಂಕಾರವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾಲೆಸ್ತೀನ್ ಬೆಂಬಲಿಸಿ ಪೋಸ್ಟ್: ವಿವಾದಕ್ಕೊಳಗಾದ ರೋಹಿತ್ ಶರ್ಮಾ ಪತ್ನಿ ರಿತಿಕಾ