Publish Date: Tue, 14 Nov 2023 (17:20 IST)
Updated Date: Tue, 14 Nov 2023 (17:32 IST)
ಇಸ್ಲಾಮಾಬಾದ್: ಬಾಲಿವುಡ್ ತಾರೆ, ಬಚ್ಚನ್ ಸೊಸೆ ಐಶ್ವರ್ಯಾ ರೈ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಪಾಕ್ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ವಿರುದ್ಧ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಕಳಪೆ ನಿರ್ವಹಣೆ ಕುರಿತು ಮಾತನಾಡುವಾಗ ಅಬ್ದುಲ್ ರಜಾಕ್, ಬಾಲಿವುಡ್ ತಾರೆ ಐಶ್ವರ್ಯಾ ರೈ ಹೆಸರನ್ನು ಉಲ್ಲೇಖಿಸಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.
ಪಾಕ್ ಕ್ರಿಕೆಟ್ ಮಂಡಳಿ ಆಟಗಾರರ ಬಗ್ಗೆ ಕೇರ್ ಮಾಡುತ್ತಿಲ್ಲ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವಾಗ ರಜಾಕ್ ನನ್ನ ಪ್ರಕಾರ ನಾವು ಆಟಗಾರರ ಗುಣಮಟ್ಟ ಸುಧಾರಿಸುವತ್ತ ಗಮನಹರಿಸುತ್ತಿಲ್ಲ. ಐಶ್ವರ್ಯಾ ರೈ ಅವರನ್ನು ಮದುವೆಯಾದರೆ ಬುದ್ಧಿವಂತ, ಒಳ್ಳೆಯ ಮಕ್ಕಳು ಹುಟ್ಟಬೇಕೆಂದಿಲ್ಲ. ಅದೇ ರೀತಿ ಗುಣಮಟ್ಟ ಸುಧಾರಿಸದೇ ಉತ್ತಮ ಫಲಿತಾಂಶ ಸಿಗದು ಎಂದಿದ್ದಾರೆ. ಅವರು ಹೀಗೆ ಹೇಳುವಾಗ ಪಕ್ಕದಲ್ಲೇ ಕೂತಿದ್ದ ಶಾಹಿದ್ ಅಫ್ರಿದಿ ಸೇರಿದಂತೆ ಇತರ ಮಾಜಿ ಕ್ರಿಕೆಟಿಗರು ಚಪ್ಪಾಳೆ ತಟ್ಟಿದ್ದಾರೆ.
ಪಾಕ್ ಕ್ರಿಕೆಟಿಗರ ಈ ವರ್ತನೆ ನೆಟ್ಟಿಗರನ್ನು ಕೆರಳಿಸಿದೆ. ಪಾಕಿಸ್ತಾನದಲ್ಲಿ ಮಹಿಳೆಯರಿಗೆ ಎಷ್ಟು ಗೌರವ ನೀಡಲಾಗುತ್ತಿದೆ ಎಂದು ಇದರಲ್ಲಿಯೇ ಗೊತ್ತಾಗುತ್ತದೆ ಎಂದು ಕೆಲವರು ಹೇಳಿದ್ದರೆ, ಮತ್ತೆ ಕೆಲವರು ಇನ್ನೂ ಎಷ್ಟು ಕೆಳ ಮಟ್ಟಕ್ಕಿಳಿಯುತ್ತೀರಿ ಎಂದು ಚಾಟಿ ಬೀಸಿದ್ದಾರೆ.