Select Your Language

Notifications

webdunia
webdunia
webdunia
webdunia

ಕಲ್ಕಿಯಲ್ಲಿ ಅಶ್ವತ್ಥಾಮನಾಗಿ ಬಿಗ್‌ಬಿ, ಈ ವಯಸ್ಸಲ್ಲೂ ಅಂದೆಂತಹ ಉತ್ಸಾಹ

ಕಲ್ಕಿಯಲ್ಲಿ ಅಶ್ವತ್ಥಾಮನಾಗಿ ಬಿಗ್‌ಬಿ, ಈ ವಯಸ್ಸಲ್ಲೂ ಅಂದೆಂತಹ ಉತ್ಸಾಹ

Sampriya

ಮುಂಬೈ , ಬುಧವಾರ, 3 ಜುಲೈ 2024 (18:21 IST)
Photo Courtesy X
ಮುಂಬೈ: ನಾಗ್ ಅಶ್ವಿನ್ ಅವರ ನಿರ್ದೇಶನದಲ್ಲಿ ಮೂಡಿಬಂದ 'ಕಲ್ಕಿ 2898 AD' ಸಿನಿಮಾದಲ್ಲಿ ಅಮಿತಾಭ್‌ ಅವರ ಲುಕ್‌ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ಸಿನಿಮಾ ನೋಡಿದ ಮಂದಿ 81ವಯಸ್ಸಿನಲ್ಲಿ ಅಮಿತಾಭ್ ಅವರ ನಟನೆಗೆ ತಲೆ ಭಾಗಿದ್ದಾರೆ.  

ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಅಶ್ವತ್ಥಾಮನಾಗಿ ರೂಪಾಂತರಗೊಂಡಿದ್ದು ಇವರ ಅಭಿನಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಮೇಕಪ್ ಕಲಾವಿದರೊಬ್ಬರು ಅಮಿತಾಬ್ ಬಚ್ಚನ್ ಅವರನ್ನು ಅಶ್ವತ್ಥಾಮನಾಗಿ ಪರಿವರ್ತಿಸಲಾಗುತ್ತಿರುವ ಮೇಕಪ್‌ನ ಲುಕ್‌ ಅನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ಡಾ ಮೇಕಪ್ ಲ್ಯಾಬ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನಟನ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, "ಇಗೋ ಅಮಿತಾಭ್ ಬಚ್ಚನ್ ಸರ್‌ ಅವರನ್ನು ಅಶ್ವತ್ಥಾಮನಾಗಿ ಪರಿವರ್ತಿಸಲಾಗಿದೆ: ಪೌರಾಣಿಕ ನಟರಿಂದ ಜೀವ ತುಂಬಿದ ಟೈಮ್‌ಲೆಸ್ ಲೆಜೆಂಡ್" ಎಂದು ಶೀರ್ಷಿಕೆ ನೀಡಿದೆ.

ಕೆಲವೇ ದಿನಗಳ ಹಿಂದೆ, ಮೇಕಪ್ ಕಲಾವಿದ ಕರಣ್‌ದೀಪ್ ಸಿಂಗ್ ಅವರು 'ಕಲ್ಕಿ 2898 AD'ಯ ಸೆಟ್‌ಗಳಿಂದ ಕೆಲವು ತೆರೆಮರೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ನೋಡಲು ಸುಮಲತಾ ಅಮ್ಮ ಬರಲಿಲ್ಲ, ಹೆತ್ತಮ್ಮನೇ ಬಂದಿದ್ದು