Select Your Language

Notifications

webdunia
webdunia
webdunia
Tuesday, 8 April 2025
webdunia

ಯುವತಿ ಭುಜದ ಮೇಲೆ ಕೈಯಿಟ್ಟ ದಳಪತಿ ವಿಜಯ್‌ಗೆ ಈ ಸ್ಥಿತಿ ಬರ್ಬಾದಿತ್ತು ಎಂದ ನೆಟ್ಟಿಗರು

Actor Thalapathy Vijay

Sampriya

ತಮಿಳುನಾಡು , ಮಂಗಳವಾರ, 2 ಜುಲೈ 2024 (18:55 IST)
Photo Courtesy X
ತಮಿಳುನಾಡು: ದಳಪತಿ ವಿಜಯ್ ಅವರು ಈಚೆಗೆ ಚೆನ್ನೈನಲ್ಲಿ ನಡೆದ ಶಿಕ್ಷಣ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿ, ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಿದರು.

ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ವಿಜಯ್ ಅವರು ಗೌರವಿಸಿದ್ದಾರೆ. ಫೋಟೋಗೆ ಪೋಸ್ ನೀಡುವಾಗ ವಿಜಯ್ ಅವರು ಹುಡುಗಿಯ ಭುಜದ ಮೇಲೆ ಕೈಯಿಟ್ಟಿದ್ದಾರೆ. ಈ ವೇಳೆ ಯುವತಿ ತನ್ನ ಭುಜದ ಮೇಲಿದ್ದ ಕೈಯನ್ನು ತೆಗೆಯುವಂತೆ ವಿಜಯ್‌ಗೆ ಸನ್ನೆ ಮಾಡುತ್ತಿರುವುದನ್ನು ಕಾಣಬಹುದು.

ಈ ತುಣುಕನ್ನು ಎಕ್ಸ್‌ನಲ್ಲಿ ನೆಟಿಜನ್ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ಕೆಲವರು ಹುಡುಗಿಯ ದೃಢವಾದ ಕ್ರಿಯೆಗಾಗಿ ಪ್ರಶಂಸಿಸಿದ್ದಾರೆ.

ಇನ್ನೂ ಕೆಲವರು ಈ ವಿಡಿಯೋ ಫೇಕ್ ಎಂದು ತಿಳಿದು ಸಂಪೂರ್ಣ ವಿಡಿಯೋಗಾಗಿ ಹುಡುಕಾಟ ನಡೆಸಿದ್ದಾರೆ. ಅದರಲ್ಲಿ ಹುಡುಗಿ ಸ್ವತಃ ಫೋಟೋ ಅವಕಾಶಕ್ಕಾಗಿ ವಿಜಯ್ ಅವರ ತೋಳನ್ನು ಹಿಡಿದಿರುವುದನ್ನು ಕಾಣಬಹುದು.

ಕೆಟ್ಟ ಉದ್ದೇಶದಿಂದ ಯಾರೋ ವಿಡಿಯೋವನ್ನು ಎಡಿಟ್ ಮಾಡಿ ಅಪ್ಲೋಡ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಯಲ್ಲಿ ಬಿದ್ದರಾ ನಟಿ ರಮ್ಯಾ : ಸ್ಯಾಂಡಲ್ ವುಡ್ ನಿರ್ಮಾಪಕನ ಜೊತೆ ಓಡಾಟದ ಬಗ್ಗೆ ಗುಸು ಗುಸು