Select Your Language

Notifications

webdunia
webdunia
webdunia
webdunia

ಬಹು ನಿರೀಕ್ಷಿತ ಪ್ರಭಾಸ್ ನಟನೆಯ 'ಕಲ್ಕಿ 2898 ಎಡಿ' ಸಿನಿಮಾದ ಟ್ರೇಲರ್ ರಿಲೀಸ್

ಬಹು ನಿರೀಕ್ಷಿತ ಪ್ರಭಾಸ್ ನಟನೆಯ 'ಕಲ್ಕಿ 2898 ಎಡಿ' ಸಿನಿಮಾದ ಟ್ರೇಲರ್ ರಿಲೀಸ್

Sampriya

ಮುಂಬೈ , ಶನಿವಾರ, 22 ಜೂನ್ 2024 (20:03 IST)
Photo Courtesy X
ಮುಂಬೈ: ನಟ ಪ್ರಭಾಸ್ ನಟನೆಯ ಬಹುನಿರೀಕ್ಷಿತ 'ಕಲ್ಕಿ 2898 AD' ಟ್ರೇಲರ್ ಬಿಡುಗಡೆಯಾಗಿದ್ದು, ಇದೀಗ ಅಭಿಮಾನಿಗಳಲ್ಲಿ ಹೊಸ ಕುತೂಹಲ ಸೃಷ್ಟಿಸಿದೆ. ನಟ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ನಟಿಸಿರುವ ಈ ಚಿತ್ರಕ್ಕೆ ನಾಗ್‌ ಅಶ್ವಿನ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ.

ಟ್ರೇಲರ್ ಅಮಿತಾಬ್ ಬಚ್ಚನ್ ಅವರ ಪಾತ್ರವಾದ ಅಶ್ವಥಾಮ, ದೀಪಿಕಾ ಪಡುಕೋಣೆ ಅವರ ಪಾತ್ರದೊಂದಿಗೆ ಮಾತನಾಡುತ್ತಾ, 'ಇಡೀ ಬ್ರಹ್ಮಾಂಡವು ದೇವರೊಳಗೆ ನೆಲೆಸಿದೆ ಎಂದು ಅವರು ಹೇಳುತ್ತಾರೆ. ಆದರೆ ದೇವರು ತಾನೇ ನಿನ್ನ ಗರ್ಭದಲ್ಲಿ ನೆಲೆಸಿದ್ದಾನೆ.' ಅಮಿತಾಭ್ ಬಚ್ಚನ್ ಪಾತ್ರವು ಪ್ರಭಾಸ್ ಅವರ ಭೈರವ ವಿರುದ್ಧ ಹೋರಾಡುತ್ತಿದೆ. ಬಿಡುಗಡೆಯಾದ ಟ್ರೇಲರ್‌ನಲ್ಲಿ ಹೆಚ್ಚಿನ ಪಾತ್ರಗಳನ್ನು ಪರಿಚಯಿಸಲಾಗಿದೆ, ಇದು ಕಮಲ್ ಹಾಸನ್ ಅವರ ವಿಶಿಷ್ಟ ನೋಟವನ್ನು ಸಹ ತೋರಿಸುತ್ತದೆ.

ವೈಜಯಂತಿ ಮೂವೀಸ್ ನಿರ್ಮಾಣದಲ್ಲಿ ಮೂಡಿಬಂದ ಪ್ಯಾನ್-ಇಂಡಿಯನ್ ಚಲನಚಿತ್ರವು ಜೂನ್ 27, 2024 ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾವಿದ್ದೇವೆ ಬಾಸ್ ಎಂದವರಿಗೆ ಹೋಗ್ಬರ್ತೀನಿ ಸೆಲೆಬ್ರಿಟಿಸ್ ಎಂದ ದರ್ಶನ್