Select Your Language

Notifications

webdunia
webdunia
webdunia
webdunia

ನಾವಿದ್ದೇವೆ ಬಾಸ್ ಎಂದವರಿಗೆ ಹೋಗ್ಬರ್ತೀನಿ ಸೆಲೆಬ್ರಿಟಿಸ್ ಎಂದ ದರ್ಶನ್

ನಾವಿದ್ದೇವೆ ಬಾಸ್ ಎಂದವರಿಗೆ ಹೋಗ್ಬರ್ತೀನಿ ಸೆಲೆಬ್ರಿಟಿಸ್ ಎಂದ ದರ್ಶನ್

Sampriya

ಬೆಂಗಳೂರು , ಶನಿವಾರ, 22 ಜೂನ್ 2024 (19:18 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ರ ಪೊಲೀಸ್ ಕಸ್ಟಡಿ ಅವಧಿ ಮುಗಿದು ಪರಪ್ಪನ ಅಗ್ರಹಾರ ಕಳುಹಿಸಿದಾಗ ನ್ಯಾಯಾಲಯದ ಮುಂದೆ ನೆರೆದಿದ್ದ ಅವರ ನೂರಾರು ಅಭಿಮಾನಿಗಳು 'ಡಿ ಬಾಸ್ ಡಿಬಾಸ್' ಎಂದು  ಜೈಕಾರ ಕೂಗಿದರು.

ಕೋರ್ಟ್ ತೀರ್ಪಿನ ನಂತರ ನಟ ದರ್ಶನ್‌ರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲು ಪೊಲೀಸ್ ವಾಹನಕ್ಕೆ ಹತ್ತಿಸಲಾಯಿತು. ಈ ವೇಳೆ ಕೋರ್ಟ್‌ ಸುತ್ತಾ ದರ್ಶನ್‌ರ ನೂರಾರು ಅಭಿಮಾನಿಗಳು ನಟನನ್ನು ನೋಡಲು ಕಾದು ಕುಳಿತಿದ್ದರು.

ಈ ವೇಲೆ ಅಭಿಮಾನಿಗಳು 'ಡಿ ಬಾಸ್ ಡಿಬಾಸ್' ಎಂದು ಜೈಕಾರ ಕೂಗಿದರು. ನಿಮ್ಮ ಜತೆ ನಾವಿದ್ದೇವೆ ಬಾಸ್ ಎಂದು ಬೆಂಬಲ ಸೂಚಿಸಿದ ಅಭಿಮಾನಿಗಳಿಗೆ ಕುಗ್ಗಿ ಹೋಗಿದ್ದ ದರ್ಶನ್  ಪೊಲೀಸ್ ವಾಹನದಲ್ಲಿ ಕೂತಾಗ ಫ್ಯಾನ್ಸ್‌ಗೆ ಕೈ ಮುಗಿದರು.

ಇನ್ನು ದರ್ಶನ್‌ರನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸುವ ಸುದ್ದಿ ತಿಳಿದ ಅಭಿಮಾನಿಗಳು ಪೊಲೀಸ್ ವಾಹನಗಳನ್ನು  ಹಿಂದೆಯೇ ಹೋದರು. ಇನ್ನೂ ಜೈಲಿನ ಸುತ್ತಾ ಡಿ ಬಾಸ್ ಅಭಿಮಾನಿಗಳನ್ನು ಕಂಟ್ರೋಲ್ ತರಲು ಲಘು ಲಾಠಿ ಚಾರ್ಜ್‌ ನಡೆಸಲಾಯಿತು.


Share this Story:

Follow Webdunia kannada

ಮುಂದಿನ ಸುದ್ದಿ

ನಟ ದರ್ಶನ್ ಮೊಬೈಲ್ ಪರಿಶೀಲನೆಗೆ ಕೋರ್ಟ್‌ ಅನುಮತಿ