Select Your Language

Notifications

webdunia
webdunia
webdunia
webdunia

ನಟ ದರ್ಶನ್ ಮೊಬೈಲ್ ಪರಿಶೀಲನೆಗೆ ಕೋರ್ಟ್‌ ಅನುಮತಿ

Renukaswamy Case

Sampriya

ಬೆಂಗಳೂರು , ಶನಿವಾರ, 22 ಜೂನ್ 2024 (17:41 IST)
Photo Courtesy X
ಬೆಂಗಳೂರು:  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿ ಮುಕ್ತಾಯವಾದ ಹಿನ್ನೆಲೆ ಇಂದು ನಟ ದರ್ಶನ್ ಹಾಗೂ ನಾಲ್ವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ಇಂದು ಆರೋಪಿಗಳನ್ನು 24ನೇ ಎಪಿಎಂಸಿ ಕೋರ್ಟ್‌ಗೆ ಹಾಜರುಪಡಿಸಿದ್ದು, ನ್ಯಾಯಾಧೀಶರು ದರ್ಶನ್ ಸೇರಿದಂತೆ ನಾಲ್ವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದರು.

ಇನ್ನೂ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಅವರ ಮೊಬೈಲ್ ಪರಿಶೀಲನೆಗೆ ಕೋರ್ಟ್ ಅನುಮತಿ ನೀಡಿದೆ. ಇದರ ಜತೆ ಇತರ ಆರೋಪಿಗಳಾದ ಧನರಾಜ್, ಪ್ರದೋಶ್ ಹಾಗೂ ವಿನಯ್ ಅವರ ಮೊಬೈಲ್‌ನ್ನು ಪರಿಶೀಲನೆ ಮಾಡಲು ಕೋರ್ಟ್ ಅವಕಾಶ ಕಲ್ಪಿಸಿದೆ.

ದರ್ಶನ್ ಮೊಬೈಲ್ ಪರಿಶೀಲನೆ ಮಾಡಿದ್ದಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟ ಪ್ರಮುಖ ಸಾಕ್ಷ್ಯಗಳು ಲಭ್ಯವಾಗಲಿದೆ. ಕೊಲೆ ನಡೆದ ಬಳಿಕ ದರ್ಶನ್ ಅವರು ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯಾರೆಲ್ಲರ ನೆರವು ಕೋರಿದ್ದಾರೆ ಎಂಬುದು ಸದ್ಯದಲ್ಲೇ ಮಾಹಿತಿ ಹೊರಬೀಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲ್ ಮುಂದೆ ನಿಂತು 'ಡಿ ಬಾಸ್'ಗೆ ಜೈ ಎಂದ ಫ್ಯಾನ್ಸ್