Select Your Language

Notifications

webdunia
webdunia
webdunia
webdunia

ಪಾರ್ಟಿ ಮಾಡುತ್ತಿದ್ದ ದರ್ಶನ್ ಮೊಬೈಲ್ ವಿಡಿಯೋ ನೋಡಿ ಶಾಕ್ ಆಗ್ತಾರೆ

Darshan
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಹಲವು ವಿಚಾರಗಳು ಬೆಳಕಿಗೆ ಬರುತ್ತಲೇ ಇವೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿ ದರ್ಶನ್ ಏನು ಮಾಡಿದ್ರು, ಮೊಬೈಲ್ ಗೆ ಬಂದ ವಿಡಿಯೋ ಶಾಕ್ ಆದ ಬಗ್ಗೆ ಈಗ ಮಾಹಿತಿ ಹೊರಬಿದ್ದಿದೆ.

ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ ಬಳಿಕ ಪವಿತ್ರಾ ಗೌಡರೊಂದಿಗೆ ಅಲ್ಲಿಂದ ಹೊರಟಿದ್ದ ದರ್ಶನ್ ಆಕೆಯನ್ನು ಮನೆಗೆ ಬಿಟ್ಟು ತಾನು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮಾಡಲು ಬರುತ್ತಾರೆ. ಅಲ್ಲಿಗೆ ಚಿಕ್ಕಣ್ಣರನ್ನು ಕರೆದಿದ್ದಾರೆ. ಇಲ್ಲಿ ಪಾರ್ಟಿ ಮಾಡುತ್ತಿದ್ದಾಗ ವಿನಯ್ ಮೊಬೈಲ್ ಗೆ ರೇಣುಕಾಸ್ವಾಮಿ ಶೆಡ್ ನಲ್ಲಿ ಸತ್ತು ಬಿದ್ದ ವಿಡಿಯೋವನ್ನು ಪವನ್ ಕಳುಹಿಸಿರುತ್ತಾರೆ. ಅದನ್ನು ದರ್ಶನ್ ಗೆ ವಿನಯ್ ತೋರಿಸಿ ನೀವು ಹೇಳಿದ ವ್ಯಕ್ತಿ ಇವನೇನಾ ಎಂದು ತೋರಿಸುತ್ತಾನೆ.

ವಿಡಿಯೋ ನೋಡಿದ ದರ್ಶನ್ ಏನು ಮಾಡಿದ್ರಿ ಎಂದು ಗಾಬರಿಯಾಗುತ್ತಾರೆ. ಬಳಿಕ ಗಾಬರಿಯಿಂದಲೇ ಶೆಡ್ ಗೆ ಹೋಗುತ್ತಾರೆ ಎಂದು ತಿಳಿದುಬಂದಿದೆ. ವಿನಯ್ ಮೊಬೈಲ್ ಗೆ ಈ ವಿಡಿಯೋ ಕಳುಹಿಸಿದವರು ಯಾರು ಎಂದು ಪೊಲೀಸರು ತನಿಖೆ ಮಾಡಿದ್ದಾರೆ. ಇದೂ ಕೂಡಾ ಈಗ ಪ್ರಮುಖ ಸಾಕ್ಷ್ಯವಾಗಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರ ಮೊಬೈಲ್ ಗಳನ್ನೂ ಪೊಲೀಸರು ಕಲೆ ಹಾಕಿ ಮಾಹಿತಿ ಸಂಗ್ರಹಣೆ ಮಾಡಿದ್ದಾರೆ. ನಿನ್ನೆ ಇನ್ನೊಬ್ಬ ಆರೋಪಿ ಕಾರ್ತಿಕ್ ಮೊಬೈಲ್ ನ್ನೂ ವಶಪಡಿಸಿಕೊಳ್ಳಲಾಗಿತ್ತು. ಇದನ್ನು ದೀಪಕ್ ಶೆಡ್ ನಲ್ಲಿ ಅಡಗಿಸಿಟ್ಟಿದ್ದ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಜ್ವಲ್, ಸೂರಜ್, ದರ್ಶನ್ ಮೇಲೆ ವಾಗ್ದಾಳಿ ನಡೆಸಿದ ನಟಿ ರಮ್ಯಾ