Select Your Language

Notifications

webdunia
webdunia
webdunia
webdunia

ಬೇಬಿ ಬಂಪ್ ಕಾಣುತ್ತಿಲ್ಲ ಎಂದವರಿಗೆ ತಕ್ಕ ಉತ್ತರ ಕೊಟ್ಟ ದೀಪಿಕಾ ಪಡುಕೋಣೆ

ಬೇಬಿ ಬಂಪ್ ಕಾಣುತ್ತಿಲ್ಲ ಎಂದವರಿಗೆ ತಕ್ಕ ಉತ್ತರ ಕೊಟ್ಟ ದೀಪಿಕಾ ಪಡುಕೋಣೆ

Sampriya

ಮುಂಬೈ , ಸೋಮವಾರ, 2 ಸೆಪ್ಟಂಬರ್ 2024 (18:57 IST)
Photo Courtesy X
ಮುಂಬೈ: ಬೇಬಿ ಬಂಪ್ ಫೋಟೋಶೂಟ್ ಅನ್ನು ಹಂಚಿಕೊಳ್ಳುವ ಮೂಲಕ ತನ್ನ ಗರ್ಭಧಾರಣೆಯ ಕುರಿತು ಮಾಡಿದ ಟ್ರೋಲ್‌ಗಳಿಗೆ ನಟಿ ದೀಪಿಕಾ ಪಡುಕೋಣೆ ಅವರು ತಕ್ಕ ಉತ್ತರ ನೀಡಿದ್ದಾರೆ.  ದೀಪಿಕಾ ಅವರು ಶೀಘ್ರದಲ್ಲೇ ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ.  

ಕಳೆದ ಕೆಲ ತಿಂಗಳ ಹಿಂದೆ ಸಾರ್ವಜನಿಕವಾಗಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ ಅವರ ಬೇಬಿ ಬಂಪ್ ಕಾಣಿಸಿಕೊಂಡಿಲ್ಲ ಎಂದು ನಟಿಯನ್ನು ಕೆಟ್ಟದಾಗಿ ಟ್ರೋಲ್ ಮಾಡಲಾಯಿತು.

ಅದಲ್ಲದೆ ಬೇಬಿ ಬಂಪ್ ಬಗ್ಗೆ ಕಠಿಣ ಕಾಮೆಂಟ್‌ಗಳನ್ನು ಮತ್ತು ವದಂತಿಗಳನ್ನು ಎದುರಿಸಿದರು. ಇದೀಗ ನಟಿ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್‌ನೊಂದಿಗೆ ಮಾಡಿಸಿಕೊಂಡ ಫೋಟೋಶೂಟ್‌ ಅನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ದಂಪತಿಗಳಿಗೆ ಶುಭಕೋರಿ, ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ಚಿತ್ರೀಕರಣದ ಒಂದು ಗಮನಾರ್ಹ ಚಿತ್ರದಲ್ಲಿ, ದೀಪಿಕಾ ಕಪ್ಪು ಸೂಟ್‌ನೊಂದಿಗೆ ಜೋಡಿಯಾಗಿರುವ ಕಪ್ಪು ಲೇಸ್ ಬ್ರ್ಯಾಲೆಟ್ ಅನ್ನು ಧರಿಸಿ, ಬೇಬಿ ಬಂಪ್‌ ಪೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.  ದಂಪತಿಗಳು ಮೊದಲ ಮಗುವನ್ನು ಸ್ವಾಗತಿಸುತ್ತಿರುವ ಬಗ್ಗೆ ಈ ವರ್ಷದ ಫೆಬ್ರವರಿಯಲ್ಲಿ ಇನ್‌ಸ್ಟಾಗ್ರಾಂನಲ್ಲಿ ಹೇಳಿದ್ದರು.  ಸೆಪ್ಟೆಂಬರ್ 2024 ರಲ್ಲಿ ತಮ್ಮ ಮಗು ಬರುವ ನಿರೀಕ್ಷೆಯಿದೆ ಎಂದು ಅವರು ಹಂಚಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬರ್ತಡೇ ದಿನ ಅಭಿಮಾನಿಗಳಿಗೆ ಡಬಲ್ ಗುಡ್‌ನ್ಯೂಸ್ ಕೊಟ್ಟ ಕಿಚ್ಚ ಸುದೀಪ್