ಮುಂಬೈ: ಪಂಜಾಬಿ ಗಾಯಕ ದಿಲ್ಜೀತ್ ದೊಸ್ಸಾಂಜ್ ಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕನ್ನಡ ಹೇಳಿಕೊಟ್ಟ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಂಜಾಬಿ ಗಾಯಕ ದಿಲ್ಜೀತ್ ದೊಸ್ಸಾಂಜ್ ಲೈವ್ ಕಾರ್ಯಕ್ರಮ ಬೆಂಗೂರಿನಲ್ಲಿತ್ತು. ಈ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಕೂಡಾ ಭಾಗಿಯಾಗಿದ್ದರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವಾಗಿದ್ದರಿಂದ ದೀಪಿಕಾ ಬಳಿಕ ಕನ್ನಡದ ಮಾತು ಕೇಳಿ ಕಲಿತುಕೊಂಡ ದಿಲ್ಜಿತ್ ಅದನ್ನು ಅನುಕರಿಸಿದರು.
ಎಲ್ಲರಿಗೂ ಗೊತ್ತಿರುವ ಹಾಗೆ ಈಗ ಬಾಲಿವುಡ್ ಆಳುತ್ತಿರುವ ದೀಪಿಕಾ ಪಡುಕೋಣೆ ಮೂಲತಃ ಕನ್ನಡಿಗರೇ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅವರು ಮೊದಲು ಬಣ್ಣ ಹಚ್ಚಿದ್ದು ಕನ್ನಡ ಸಿನಿಮಾದಲ್ಲೇ. ಪರರಾಜ್ಯದಲ್ಲಿ ಹೆಸರು ಮಾಡಿದ್ದರೂ ದೀಪಿಕಾ ಕನ್ನಡ ಮರೆತಿಲ್ಲ ಎಂಬುದಕ್ಕೆ ಇದೇ ಸಾಕ್ಷಿ.
ದಿಲ್ಜಿತ್ ವಿಶ್ವದಾದ್ಯಂತ ಟೂರ್ ಮಾಡಿ ಕಾರ್ಯಕ್ರಮ ನಡೆಸುತ್ತಾರೆ. ಅವರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ದೀಪಿಕಾ ಪಡುಕೋಣೆಯನ್ನು ಕರೆಸಿದ್ದರು. ದೀಪಿಕಾ ಜೊತೆ ದಿಲ್ಜಿತ್ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದರೂ ಆಗಲಿಲ್ಲ. ಕೊನೆಗೆ ದೀಪಿಕಾ ತಾವೇ ದಿಲ್ಜಿತ್ ಗೆ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಕನ್ನಡದಲ್ಲಿ ಹೇಳಲು ಹೇಳಿಕೊಟ್ಟರು. ದೀಪಿಕಾ ಕನ್ನಡ ಕೇಳಿ ನೆರೆದಿದ್ದವರೂ ಖುಷಿಪಟ್ಟರು. ಆ ವಿಡಿಯೋ ಇಲ್ಲಿದೆ ನೋಡಿ.