Select Your Language

Notifications

webdunia
webdunia
webdunia
webdunia

ಟೊಮೆಟೊ, ಕೊತ್ತಂಬರಿ ಸೊಪ್ಪು ಬಳಿಕ ಈರುಳ್ಳಿ, ಬೆಳ್ಳುಳ್ಳಿ ಬೆಲೆಯೂ ಗಗನಕ್ಕೆ

Onion

Krishnaveni K

ಬೆಂಗಳೂರು , ಶನಿವಾರ, 7 ಡಿಸೆಂಬರ್ 2024 (09:55 IST)
ಬೆಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮ ಸುರಿದ ಮಳೆಯಿಂದಾಗಿ ಜನರು ದಿನನಿತ್ಯ ಬಳಸುವ ತರಕಾರಿಗಳ ಬೆಲೆ ಏಕಾಏಕಿ ಏರಿಕೆಯಾಗಿದೆ. ಮೊನ್ನೆಯಷ್ಟೇ ಟೊಮೆಟೊ, ಕೊತ್ತಂಬರಿ ಸೊಪ್ಪು ಬೆಲೆ ಏರಿಕೆಯಾಗಿತ್ತು. ಈಗ ಈರುಳ್ಳಿ, ಬೆಳ್ಳುಳ್ಳಿಗೂ ಏರಿಕೆಯಾಗಿದೆ.

ಇದರೊಂದಿಗೆ ಜನರು ದಿನನಿತ್ಯ ಬಳಸುವ ಎಲ್ಲಾ ತರಕಾರಿಗಳೂ ದುಬಾರಿಯಂತಾಗಿದೆ. ಈರುಳ್ಳಿ ಬೆಲೆ ಕೆಲವು ದಿನಗಳ ಹಿಂದಷ್ಟೇ ಒಮ್ಮೆ ಏರಿಕೆಯಾಗಿತ್ತು. ಆದರೆ ಬಳಿಕ ಇಳಿಕೆಯಾಗಿತ್ತು. ಆದರೆ ಈಗ ಮಳೆಯಾದ ಬಳಿಕ ಮತ್ತೆ ಈರುಳ್ಳಿ ಭಾರೀ ದುಬಾರಿಯಾಗಿದೆ. ಈ ಮೊದಲು 40 ರಿಂದ 50 ರೂ.ಗೆ ಉತ್ತಮ ಗುಣಮಟ್ಟದ ಈರುಳ್ಳಿ ಮಾರಾಟವಾಗುತ್ತಿತ್ತು.

ಆದರೆ ಈಗ 70 ರಿಂದ 80 ರೂ.ಗೆ ತಲುಪಿದೆ. ಸಾಮಾನ್ಯ ಗುಣಮಟ್ಟದ ಈರುಳ್ಳಿಗೆ 60 ರೂ.ವರೆಗೆ ಬೆಲೆಯಾಗಿದೆ. ಬೆಳ್ಳುಳ್ಳಿಯೂ ಕಡಿಮೆಯೇನಲ್ಲ. ರೀಟೇಲ್ ನಲ್ಲಿ ಬೆಳ್ಳುಳ್ಳಿ ಬೆಲೆ 500 ರೂ. ದಾಟಿದೆ. ಅಕಾಲಿಕ ಮಳೆ, ಹೊರರಾಜ್ಯದಿಂದ ಆಮದು ಕೊರತೆಯಾಗಿರುವುದೇ ಈ ಬೆಲೆ ಏರಿಕೆಗೆ ಕಾರಣ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಮತ್ತು ನೆರೆ ರಾಜ್ಯಗಳಲ್ಲಿ ಅಕಾಲಿಕ ಮಳೆಯಾಗಿತ್ತು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ಕೆಲವೇ ದಿನಗಳಲ್ಲಿ ಈರುಳ್ಳಿ ಬೆಲೆ ಮತ್ತೊಮ್ಮೆ ಶತಕ ದಾಟುವ ಸಾಧ್ಯತೆಯಿದೆ. ಬೆಲೆ ಏರಿಕೆ ಸುಧಾರಿಸಬೇಕಾದರೆ ಜನರಿಯವರೆಗೂ ಕಾಯಬೇಕಾದ ಪರಿಸ್ಥಿತಿಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೊಸೆಗೆ ಸರ್ಕಾರ ಖಾಯಂ ನೌಕರಿ ಕೊಡಕ್ಕೆ ಮನಸ್ಸು ಮಾಡ್ಲಿ: ರೇಣುಕಾಸ್ವಾಮಿ ತಂದೆಯಿಂದ ಮತ್ತೆ ಡಿಮ್ಯಾಂಡ್