Select Your Language

Notifications

webdunia
webdunia
webdunia
webdunia

ಸೊಸೆಗೆ ಸರ್ಕಾರ ಖಾಯಂ ನೌಕರಿ ಕೊಡಕ್ಕೆ ಮನಸ್ಸು ಮಾಡ್ಲಿ: ರೇಣುಕಾಸ್ವಾಮಿ ತಂದೆಯಿಂದ ಮತ್ತೆ ಡಿಮ್ಯಾಂಡ್

Renukaswamy

Krishnaveni K

ಚಿತ್ರದುರ್ಗ , ಶನಿವಾರ, 7 ಡಿಸೆಂಬರ್ 2024 (09:38 IST)
ಚಿತ್ರದುರ್ಗ: ದರ್ಶನ್ ಆಂಡ್ ಗ್ಯಾಂಗ್ ನಿಂದ ಹತನಾಗಿದ್ದಾನೆ ಎನ್ನಲಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರ ಖಾಯಂ ಸರ್ಕಾರೀ ನೌಕರಿ ಕೊಡಲಿ ಎಂದು ರೇಣುಕಾ ತಂದೆ ಮತ್ತೆ ಡಿಮ್ಯಾಂಡ್ ಮಾಡಿದ್ದಾರೆ.

ನಿನ್ನೆ ರೇಣುಕಾಸ್ವಾಮಿ ಮನೆಯಲ್ಲಿ ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ಪೂಜೆ ನಡೆಸಲಾಗಿತ್ತು. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಗಾಗಿ ರಂಭಾಪುರಿ ಶ್ರೀಗಳು ಪೂಜೆ ಮಾಡಿದ್ದರು. ಇದಾದ ಬಳಿಕ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯನವರನ್ನು ಮಾಧ್ಯಮಗಳು ಮಾತನಾಡಿಸಿವೆ.

ಈ ವೇಳೆ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ‘ನಮ್ಮ ಜಗದ್ಗುರುಗಳಾದ ರಂಭಾಪುರ ಶ್ರೀಗಳು ನಮ್ಮ ಮನೆಗೆ ಬಂದು ಪೂಜೆ ಮಾಡಿ ನಮ್ಮ ಮಗನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡಿ ಹೋಗಿದ್ದಾರೆ. ನಿಮಗೆ ಒಳ್ಳೆಯದಾಗುತ್ತದೆ ಎಂದು ಹೇಳಿ ಹೋಗಿದ್ದಾರೆ. ನಾವು ಇಲ್ಲಿಯವರೆಗೂ ನ್ಯಾಯಾಂಗ, ಪೊಲೀಸರ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ. ಮುಂದೆಯೂ ಇರುತ್ತದೆ. ಇದರ ಜೊತೆಗೆ ನಮ್ಮ ಸೊಸೆ ಸಹಾನುಭೂತಿಯಿಂದ ಸರ್ಕಾರ ಒಂದು ಸರ್ಕಾರಿ ಖಾಯಂ ನೌಕರಿ ಕೊಡಲಿ ಎಂದು ಕೇಳಿಕೊಳ್ಳುತ್ತೇವೆ’ ಎಂದು ಕಾಶೀನಾಥಯ್ಯ ಮಾಧ್ಯಮಗಳು ಮುಂದೆ ಕಣ್ಣೀರು ಹಾಕಿದ್ದಾರೆ.

‘ಸದ್ಯಕ್ಕೆ ನನ್ನ ಸೊಸೆ, ಮೊಮ್ಮಗು ಮನೆಯಲ್ಲಿಲ್ಲ. ಅವರ ತವರು ಮನೆಯಲ್ಲಿದ್ದಾರೆ. ಅವರು ಇಲ್ಲಿ ಇದ್ದಿದ್ರೆ ಚೆನ್ನಾಗಿರುತ್ತಿತ್ತು. ಗುರುಗಳು ಈ ಕಡೆ ಬಂದಾಗ ಮನೆಗೆ ಬಂದು ಪೂಜೆ ಮಾಡಿ ಹೋಗಿದ್ದಾರೆ. ನಿನ್ನೆಯೇ ಬಂದು ಮನೆಯಲ್ಲಿ ವಾಸ್ತವ್ಯ ಹೂಡಿ ಪೂಜೆ ಮಾಡಿ ಹೋಗಿದ್ದಾರೆ. ಗುರುಗಳ ದಯೆಯಿಂದ ನಮಗೆ ಎಲ್ಲಾ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಡಾದಲ್ಲಿ ಮತ್ತೊಂದು ಹಗರಣ: 3 ಸಾವಿರ ರೂ ಗೆ ಜಮೀನು, 300 ಕೋಟಿ ನಷ್ಟ