ಮೈಸೂರು: ಹಲವು ತಿಂಗಳ ಬ್ರೇಕ್ ಬಳಿಕ ನಟ ದರ್ಶನ್ ಇಂದಿನಿಂದ ಮತ್ತೆ ಬಣ್ಣ ಹಚ್ಚಲಿದ್ದಾರೆ. ಶೂಟಿಂಗ್ ಆರಂಭಕ್ಕೆ ಮುನ್ನ ಅವರು ಭೇಟಿ ಕೊಟ್ಟ ಜಾಗ ಯಾವುದು ವಿಡಿಯೋ ನೋಡಿ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ನಟ ದರ್ಶನ್ ಹಲವು ಸಮಯದಿಂದ ಸಿನಿಮಾಗಳಿಂದ ದೂರವಿದ್ದಾರೆ. ಜಾಮೀನಿನ ಮೇಲೆ ಬಿಡುಗಡೆಯಾದರೂ ಬೆನ್ನು ನೋವಿನ ಕಾರಣ, ಕಾನೂನು ಪ್ರಕ್ರಿಯೆಗಳ ಕಾರಣ ಶೂಟಿಂಗ್ ಮಾಡಲು ಸಾಧ್ಯವಾಗಿರಲಿಲ್ಲ.
ಇಂದಿನಿಂದ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ನಲ್ಲಿ ಅವರು ಡೆವಿಲ್ ಶೂಟಿಂಗ್ ಪುನರಾರಂಭಿಸಲಿದ್ದಾರೆ. ಈಗಾಗಲೇ ಹಲವು ಸನ್ನಿವೇಶಗಳ ಚಿತ್ರೀಕರಣ ನಡೆದಿದ್ದು ಉಳಿದ ಭಾಗದ ಚಿತ್ರೀಕರಣ ಆರಂಭಿಸಲಿದ್ದಾರೆ. ಇನ್ನು, ನಟ ದರ್ಶನ್ ನೋಡಲು ಅಭಿಮಾನಿಗಳು ಬರಬಹುದು ಎಂಬ ಹಿನ್ನಲೆಯಲ್ಲಿ ಚಿತ್ರತಂಡ ಸುಮಾರು ಒಂದೂವರೆ ಲಕ್ಷ ರೂ. ಖರ್ಚು ಮಾಡಿ ಪೊಲೀಸರನ್ನು ಭದ್ರತೆ ನೇಮಿಸಿದೆ.
ಇಂದು ಶೂಟಿಂಗ್ ಆರಂಭಿಸುವ ಮುನ್ನ ನಟ ದರ್ಶನ್ ತಮ್ಮ ಮೆಚ್ಚಿನ ತಾಣ ನಾಡದೇವತೆ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಬಿಗಿ ಭದ್ರತೆಯಲ್ಲೇ ದೇವಾಲಯಕ್ಕೆ ಬಂದ ಅವರು ಬಳಿಕ ಶೂಟಿಂಗ್ ಗೆ ತೆರಳಿದ್ದಾರೆ.