Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯ ಹೊಸ ಮನೆ ಕಟ್ಟಿಸ್ತಿದ್ದಾರೆ ಅಂತ ಬೀದಿ ವ್ಯಾಪಾರಿಗಳ ಎತ್ತಂಗಡಿ ಸರೀನಾ

Siddaramaiah

Krishnaveni K

ಮೈಸೂರು , ಸೋಮವಾರ, 3 ಮಾರ್ಚ್ 2025 (10:20 IST)
ಮೈಸೂರು: ನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ಹೊಸ ಮನೆ ಕಟ್ಟಿಸುತ್ತಿದ್ದು ಇದರ ಅಕ್ಕಪಕ್ಕದಲ್ಲಿರುವ ಬೀದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಮೈಸೂರಿನಲ್ಲಿ ಸಿಎಂ ಹೊಸ ಮನೆ ಕಟ್ಟಿಸುತ್ತಿದ್ದಾರೆ. ಇನ್ನೇನು ಎರಡು ತಿಂಗಳಲ್ಲಿ ಈ ಮನೆ ಕೆಲಸ ಮುಗಿಯಲಿದೆ. ಆದರೆ ಅದಕ್ಕಾಗಿ ಅವರ ಮನೆ ಸುತ್ತಮುತ್ತ ಇರುವ ಬಡ ಬೀದಿ ವ್ಯಾಪಾರಿಗಳನ್ನು ಮೈಸೂರು ನಗರ ಪಾಲಿಕೆ ಜಾಗ ಖಾಲಿ ಮಾಡಲು ಸೂಚನೆ ನೀಡಿದೆ.

ಇಲ್ಲಿ ಸುತ್ತಮುತ್ತ ಹಲವು ಟೀ ಅಂಗಡಿಗಳು, ಫಾಸ್ಟ್ ಫುಡ್ ಅಂಗಡಿಗಳು, ತರಕಾರಿ ಅಂಗಡಿಗಳನ್ನು ಹಾಕಿಕೊಂಡು ಜೀವನ ಮಾಡುವವರು ಅನೇಕರಿದ್ದಾರೆ. ಆದರೆ ಅವರಿಗೆಲ್ಲಾ ಸಿಎಂ ಮನೆ ಎಂಬ ಕಾರಣಕ್ಕೆ ಜಾಗ ಖಾಲಿ ಮಾಡಲು ಸೂಚನೆ ನೀಡಲಾಗಿದೆ.

ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸಿಎಂ ಮನೆ ಕಟ್ಟಿಸುತ್ತಿದ್ದರೆ ನಾವು ಯಾಕೆ ಜಾಗ ಖಾಲಿ ಮಾಡಬೇಕು ಎಂದು ಬೀದಿ ವ್ಯಾಪಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದು ಬಡವರ ಪರ ಎನ್ನುವ ಸಿಎಂ ಈ ರೀತಿ ಮಾಡುವುದು ಸರೀನಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಕ್ಕಿ ಜ್ವರ ಇಫೆಕ್ಟ್: ಚಿಕನ್ ಅಂದ್ರೆ ಬೇಡಪ್ಪಾ ಎನ್ನುತ್ತಿರುವ ಜನ, ಮಟನ್ ಗೆ ಭಾರೀ ಡಿಮ್ಯಾಂಡ್